32.6 C
New York
Monday, June 30, 2025

Buy now

spot_img

ಗದಗ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ – ಅಬ್ದುಲ್ ಮುನಾಫ್ ಮುಲ್ಲಾ 

ಗದಗ : ಶತ ಶತಮಾನಗಳಿಂದ ಆಚರಿಸುತ್ತಾ ಬಂದಿರುವ ತ್ಯಾಗ ಮತ್ತು ಬಲಿದಾನದ ಹಬ್ಬವಾದ ಮೊಹರಂ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿದ್ದು ಖಾನತೋಟ ಓಣಿಯ ಇಮಾಮ ಖಾಸಿಂ ಪಂಜದ ಮಸೂತಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುತ್ತಾರೆ. ಈ ವರ್ಷ ಮೊಹರಂ ತಿಂಗಳು ದಿ.27 ಜುಲೈ ಶುಕ್ರವಾರ ಆರಂಭಿಕ ಮೊದಲ ದಿನವಾಗಿದೆ. ದಿ.01 ಜುಲೈ ಮಂಗಳವಾರ ದಿನದಂದು ಪಂಜಾಗಳನ್ನು ಕೋರಿಸಲಾಗುವುದು , ದಿ.04 ಜುಲೈ ಶುಕ್ರವಾರ ದಿನದಂದು ಸಂದಲರಾತ್ರಿ ಇರುತ್ತದೆ ಮತ್ತು ದಿ.05 ಜುಲೈ ಶನಿವಾರ ಖತಲ್ ರಾತ್ರಿ ಇರುತ್ತದೆ ಮತ್ತು ದಿ.06 ಜುಲೈ ರವಿವಾರ ದಿನದಂದು ಮೊಹರಂ ಕೊನೆಯ ದಿನ ಹಾಗೂ ಶಹಾದತ್ , ದೇವರು ಹೊಳೆಗೆ ಹೋಗುವ ದಿನವಾಗಿರುತ್ತದೆ ಎಂದು ಗದಗಿನ ಖಾನತೋಟದ ಓಣಿಯ ಇಮಾಮ ಖಾಸಿಂ ಪಂಜದ ಮಸೂತಿಯ ಮುಜಾವರರಾದ ಅಬ್ದುಲ್ ಮುನಾಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news