ಬೆಂಗಳೂರು: ಪ್ರೊಬೇಷನರಿ ಡಿವೈಎಸ್‌ಪಿ (ಸಿವಿಲ್) ಅಧಿಕಾರಿಯಾಗಿರುವ ಮುರ್ತುಜಾ ಖಾದ್ರಿ ಅವರನ್ನು ಗದಗ ಉಪ ವಿಭಾಗ, ಗದಗ ಜಿಲ್ಲೆಗೆ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಛೇರಿಯಿಂದ 2025ರ ಮೇ 20ರಂದು ಈ ಕುರಿತು ಆದೇಶ ಜಾರಿಯಾಗಿದೆ.
ಪೊಲೀಸ್ ಸಿಬ್ಬಂದಿ ಮಂಡಳಿಯ 2025ರ ಮೇ 20ರ ನಡವಳಿಯ ಆಧಾರದ ಮೇಲೆ ಈ ಸ್ಥಳ ನಿಯುಕ್ತಿ ಮಾಡಲಾಗಿದೆ. ಮುರ್ತುಜಾ ಖಾದ್ರಿ ಅವರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 2025ರ ಮೇ 6ರಂದು ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದರು.
ಆದೇಶದ ಪ್ರಕಾರ, ಮುರ್ತುಜಾ ಖಾದ್ರಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಗದಗದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು. ಅಲ್ಲದೆ, ಸಂಬಂಧಪಟ್ಟ ಘಟಕಾಧಿಕಾರಿಗಳು ಮುರ್ತುಜಾ ಖಾದ್ರಿ ಅವರು ವರದಿ ಮಾಡಿದ ಬಗ್ಗೆ ಪೊಲೀಸ್ ಪ್ರಧಾನ ಕಚೇರಿಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.