20.8 C
New York
Monday, May 19, 2025

Buy now

spot_img

ಗದಗ : ವಾಕರಸಾ ಸಂಸ್ಥೆಯಿಂದ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಸಾರ್ವಜನಿಕರ ಅಭಿಪ್ರಾಯ ಕಾರ್ಯಕ್ರಮ

ಗದಗ  ಮೇ 17: ಗದಗ ವಿಭಾಗದ ಎಲ್ಲ ತಾಲೂಕಾ ಕೇಂದ್ರ ಬಸ್ ನಿಲ್ದಾಣಗಳಲ್ಲಿ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಶೀರ್ಷಿಕೆಯಡಿಯಲ್ಲಿ ಬಸ್ ನಿಲ್ದಾಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು QR (ಕ್ಯೂಆರ್) ಕೋಡ ಮುದ್ರಿತ ಭಿತ್ತಿ ಪತ್ರವನ್ನು ಬುಧವಾರ ( ದಿ 14 ರಂದು) ಗದಗ ಹೊಸ ಬಸ್ ನಿಲ್ದಾಣದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಡಿ.ಎಂ. ದೇವರಾಜ ರವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಶೌಚಾಲಯದ ದರ ಪಟ್ಟಿ ಅಳವಡಿಕೆ, ಶುದ್ದ ನೀರಿನ ವ್ಯವಸ್ಥೆ ಸಂಚಾರ ನಿಯಂತ್ರಕರು ಸೌಜನ್ಯದ ನಡವಳಿಕೆ ಇತ್ಯಾದಿ ಅಂಶಗಳ ಕುರಿತಾದ ಮೌಲ್ಯಮಾಪನ ಮಾಡಿ ಶ್ರೇಣಿವಾರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಕುರಿತಾಗಿ ಕ್ರಮ ಕೈಗೊಳ್ಳಲು ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಸೂಚನೆಯಂತೆ ಎಲ್ಲ ಬಸ್ ನಿಲ್ದಾಣಗಳಲ್ಲಿ ಭಿತ್ತಿ ಪತ್ರವನ್ನು ಪ್ರದರ್ಶಿಸಲಾಗುವದು. ಸಾರ್ವಜನಿಕರು ಮೊಬೈಲ್ನಿಂದ ( ಕ್ಯೂಆರ್) ಕೋಡ್ ಸ್ಕಾö್ಯನ್ ಮಾಡಿ ಹೆಚ್ಚು ಹೆಚ್ಚು ಅಭಿಪ್ರಾಯ ದಾಖಲಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ, ಸಿ.ವಿ. ಇಟಗಿ ವಿತಾಂಶಿ, ಶ್ರೀಮತಿ ವಿದ್ಯಾ ಕಾಂಬಳೆ ಸ.ಆಡಳಿತಾಧಿಕಾರಿ, ಬಿ.ಎಲ್.ಗೆಣ್ಣೂರ, ನಿಲ್ದಾಣಾಧಿಕಾರಿ ಹಾಗೂ ಸಾರಿಗೆ ನಿಯಂತ್ರಕರು ಹಾಗೂ ಸಾರ್ವಜನಿಕ ಪ್ರಯಾಣಿಕರು ಹಾಜರಿದ್ದರು.

ಸಾರ್ವಜನಿಕ ಪ್ರಯಾಣಿಕರು ಬಸ್ ನಿಲ್ದಾಣದ ಮೌಲ್ಯ ಮಾಪನ ದಾಖಲಿಸುವ ಬಗೆ: ಮೊಬೈಲ್ನಿಂದ ( ಕ್ಯೂ ಆರ್) ಕೋಡ್ ನ್ನು ಸ್ಕಾö್ಯನ್ ಮಾಡುವದು. (ಕ್ಯೂಆರ್ ) ಕೋಡ್ ಲಿಂಕ್‌ನಲ್ಲಿ ತಮ್ಮ ಅಭಿಪ್ರಾಯ ಈ ಕೆಳಗಿನಂತೆ ದಾಖಲಿಸುವದು. ನೊಂದಾಯಿತ ಇ-ಮೇಲ್ ಐಡಿ ರಜಿಸ್ಟರ್ ಮಾಡುವದು. ಶೌಚಾಲಯದ ಸ್ವಚ್ಛತೆ, ಬಸ್ ನಿಲ್ದಾಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ, ಶೌಚಾಲಯ/ಮೂತ್ರಾಲಯದ ಬಳಕೆಯ ಶುಲ್ಕದ ಕುರಿತು ರೇಟಿಂಗ್ಸ್ ನೀಡುವದು. ಇತರೆ ಅನಿಸಿಕೆ ಅಥವಾ ಅಭಿಪ್ರಾಯವನ್ನು ದಾಖಲಿಸುವದು.ಒಟ್ಟಾರೆ ಶ್ರೇಣಿಯನ್ನು ನೀಡುವದು. ಇದರಿಂದಾಗಿ ಬಸ್ ನಿಲ್ದಾಣದ ಸ್ವಚ್ಛತೆ ನಿರ್ವಹಿಸಲು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಸಹಕಾರಿಯಾಗುತ್ತದೆ,

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ವಾಕರಸಾ ಸಂಸ್ಥೆಯಿಂದ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಸಾರ್ವಜನಿಕರ ಅಭಿಪ್ರಾಯ ಕಾರ್ಯಕ್ರಮ “ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ