ಗದಗ : ಸ್ಥಳೀಯ ಕೆ ವ್ಹಿ ಎಸ್ ಆರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘ ರಿ . ಬೆಂಗಳೂರು ಜಿಲ್ಲಾ ಘಟಕ ಗದಗದ ಖಜಾಂಚಿಗಳು ,ಭೋವಿ ಸಮಾಜದ ಕ್ರೀಯಾ ಶೀಲ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಅವರಿಗೆ ತಮಿಳುನಾಡಿನ ಏಷಿಯಾ ಇಂಟರ್ ನ್ಯಾಷನಲ್ ಕಲ್ಟರ ರಿಸರ್ಚ ಯುನಿವರ್ಸಿಟಿ ಹಾಗೂ ಏಷ್ಯಾ ಇಂಟರನ್ಯಾಷನಲ್ ಕಲ್ಟರ ಅಕಾಡೆಮಿ ಗಳ ವತಿಯಿಂದ ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ 2025ನೇ ಸಾಲಿನಲ್ಲಿ ಕೊಡಮಾಡುವ”ಗೌರವ ಡಾಕ್ಟರೇಟ್ ಪದವಿ”ಗೆ ಆಯ್ಕೆ ಮಾಡಿ ಇಂದುಎಪ್ರಿಲ್ 26 ರಂದು ಬೆಂಗಳೂರಿನ ಹೊಸೂರು ಕ್ಲಾರೆಸ್ಟಾ ಸಾಂಸ್ಕೃತಿಕ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನುನೀಡಿ ಗೌರವಿಸಲಾಯಿತು