18.9 C
New York
Saturday, June 28, 2025

Buy now

spot_img

ಗದಗ : ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ !

ಗದಗ : ಗದಗ ಜಿಲ್ಲೆಯ ಮುಳುಗುಂದ ಪಟ್ಟಣದಲ್ಲಿ ತಂದೆಯೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಾರು 55 ವರ್ಷದ ತಂದೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ.

ಈ ಘಟನೆ ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ತಂದೆ ರಮೇಶ್ ಮೇಲೆ ಈಗ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿ ಆಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಅತ್ಯಾಚಾರದ ನಂತರ ಯಾರಿಗೂ ಹೇಳದಂತೆ ಪಾಪಿ ತಂದೆ ಬೆದರಿಕೆ ಹಾಕುತ್ತಿದ್ದ. ಯಾರ ಮುಂದಾದರೂ ಹೇಳಿದರೆ ಕೊಲೆ ಮಾಡುವುದಾಗಿ ಮಗಳಿಗೆ ಹಿಂಸೆ ನೀಡುತ್ತಿದ್ದ ಎಂದು ಸಂತ್ರಸ್ತೆ ತಾಯಿಯೇ ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news