ಬೆಂಗಳೂರು: ಏಪ್ರಿಲ್ 8 ಬುಧವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಮಧ್ಯಾಹ್ನ 12:30 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು 1:30ಕ್ಕೆ ವೆಬ್‌ಸೈಟ್ ಮೂಲಕ ಫಲಿತಾಂಶ ವೀಕ್ಷಿಸಬಹುದು.
ಫಲಿತಾಂಶ ಪ್ರಕಟವಾದ ನಂತರ, ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಧಿಕೃತ ವೆಬ್‌ಸೈಟ್ karresults.nic.in ಪರಿಶೀಲಿಸಬಹುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಮೈನ್ ಪೇಜ್‌ನಲ್ಲಿ 2nd PUC Result 2025 ಎಂಬಲ್ಲಿ ಕ್ಲಿಕ್ ಮಾಡಿ ಲಿಂಕ್ ಓಪನ್ ಮಾಡಿ.
ನಂತರ ಲಾಗಿನ್ ವಿವರಗಳನ್ನು ನಮೂದಿಸಿ (ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಕ್ಯಾಪ್ಚಾ ಕೋಡ್).
ನಂತರ ಸಬ್ಮಿಟ್ ಕೊಟ್ಟು ಫಲಿತಾಂಶ ಪರಿಶೀಲಿಸಿ.
ಈ ಪುಟದಲ್ಲಿ ನಿಮ್ಮ ಫಲಿತಾಂಶ ಕಾಣುತ್ತದೆ. ಈ ಪುಟವನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಅಂಕಪಟ್ಟಿ ತಡವಾಗಿ ಸಿಗುವುದರಿಂದ ಇದನ್ನು ಪ್ರಿಂಟ್ ಮಾಡಿಟ್ಟುಕೊಳ್ಳಿ. ಇದು ನಿಮಗೆ ಭವಿಷ್ಯದಲ್ಲಿ ಬೇಕಾಗಬಹುದು.
ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ರೋಲ್ ನಂಬರ್, ಒಟ್ಟು ಅಂಕಗಳು, ವಿಷಯವಾರು ಅಂಕಗಳು ಹಾಗೂ ಫಲಿತಾಂಶ ಇರುತ್ತದೆ.