Wednesday, March 26, 2025
Google search engine
Homeಉದ್ಯೋಗಗದಗ : ಸಾಮಾಜಿಕ ನ್ಯಾಯವನ್ನು ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು

ಗದಗ : ಸಾಮಾಜಿಕ ನ್ಯಾಯವನ್ನು ರಾಷ್ಟ್ರದ ಎಲ್ಲಾ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು

76ನೇ ಗಣರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿದ ಸಚಿವ ಎಚ್.ಕೆ.ಪಾಟೀಲ್

ಗದಗ.ಜ.26 : ಭಾರತೀಯ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿದ್ದೇವೆ. ಸಾಮಾಜಿಕ ನ್ಯಾಯವನ್ನು ರಾಷ್ಟçದ ಎಲ್ಲಾ ಪ್ರಜೆಗಳಿಗೆ ಒದಗಿಸುವ ಸಂವಿಧಾನ ನಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಹೇಳಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ರವಿವಾರದಂದು ಜರುಗಿದ ಗಣರಾಜ್ಯೋತ್ಸ ದಿನಾಚರಣೆ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ದೇಶ ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಸತ್ತಾತ್ಮಕವಾದ ಆಡಳಿತವನ್ನು ಹೊಂದಿದ ಗಣರಾಜ್ಯ ಜನರಿಂದ-ಜನರಿಗಾಗಿ ಆಡಳಿತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಧ್ಯೇಯ ಮಂತ್ರ. ಈ ಧ್ಯೇಯ ಮಂತ್ರವನ್ನು ಸಾಕಾರಗೊಳಿಸಲು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು 1950ರ ಜನವರಿ 26 ರಂದು ಅಂಗೀಕರಿಸಿ ನಮ್ಮ ದೇಶವನ್ನು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ ಗಣರಾಜ್ಯವೆಂದು ಘೋಷಣೆ ಮಾಡಲಾಯಿತು ಎಂದರು.

ಇಂದು ನಾವು ಆಚರಿಸುತ್ತಿರುವ ಗಣರಾಜ್ಯೋತ್ಸವ ಅತ್ಯಂತ ವೈಶಿಷ್ಟ÷್ಯ ಪೂರ್ಣವಾದುದಾಗಿದೆ. ನೂರು ವಸಂತಗಳ ಹಿಂದೆ 1924ರಲ್ಲಿ ನಮ್ಮ ಬೆಳಗಾವಿಯಲ್ಲಿ ನಡೆದ ಎ.ಐ.ಸಿ.ಸಿ. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನಮ್ಮ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಸ್ಮರಣೆಯಲ್ಲಿ “ಗಾಂಧಿ ಭಾರತ ಶತಮಾನೋತ್ಸವವನ್ನು ವರ್ಷಪೂರ್ಣ ಆಚರಿಸುತ್ತಿದ್ದೇವೆ. ರಾಷ್ಟçಪಿತ ಮಹಾತ್ಮ ಗಾಂಧೀಜಿ ಶತಮಾನದ ಶ್ರೇಷ್ಠ ಉತ್ತಮ ಮಾನವ, ಅಂತರಾಷ್ಟಿçÃಯ ಭಾವೈಕೈಯ ಸಂಕೇತ. ಅವರು ಅಹಿಂಸೆಯ ಬೆಳಕು, ಸತ್ಯದ ಥಳಕು, ಸಮಾನತೆ ಬಿತ್ತಿದ ಚೇತನ, ಗಾಂಧೀಜಿ ಯುಗ ಪುರುಷ, ಗಾಂಧೀಜಿ ಚರ್ಚಿಸುವ ವಿಷಯವಲ್ಲ ಹೃದಯದಲ್ಲಿಟ್ಟು ಧ್ಯಾನಿಸುವ ಜೀವ. ಗಾಂಧೀಜಿ ಭಾರತಕ್ಕೆ ಆತ್ಮವಾದರೆ ವಿಶ್ವಕ್ಕೆ ಮಹಾತ್ಮರಾಗಿದ್ದಾರೆ. ಅವರನ್ನು ಸ್ಮರಿಸಿ, ನಮಿಸಿ, ಅವರ ಸನ್ಮಾರ್ಗದಲ್ಲಿ ಪಥಿಕರಾಗಲು ಇಂದು ಪಣತೊಡುವ ಪರ್ವಕಾಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ನಾಡು ಕಂಡ ಬಲು ಅಪರೂಪದ ರಾಜಕಾರಣಿ, ನಾಡು ಮೆಚ್ಚಿದ ಜನನಾಯಕ, ಸಹಕಾರ ರಂಗದ ಭೀಷ್ಮ ದಿ. ಕೆ. ಎಚ್. ಪಾಟೀಲರ ಜನ್ಮ ಶತಮಾನೋತ್ಸವ ವರ್ಷಾಚರಣೆ ನಡೆಯುತ್ತಿರುವ ಪುಣ್ಯ ಪ್ರಸಂಗದಲ್ಲಿ ನಾವು ಶೋಷಣೆಮುಕ್ತ, ಸಮಾನತೆಯ ಸಮಾಜ ಕಟ್ಟುವಲ್ಲಿ ಕ್ರೀಯಾಶೀಲ ಪೂರ್ವಕ ತೊಡಗಿಸಿಕೊಳ್ಳಲು ಸಮರ್ಪಿತರಾಗಲು ದಾಪುಗಾಲುಗಳನ್ನೀಡೋಣ ಎಂದು ಕರೆ ನೀಡಿದರು.

ಗದುಗಿನಲ್ಲಿ ಹೆಮ್ಮೆಯಿಂದ ತಲೆಯೆತ್ತಿರುವ ವಿಶೇಷ ಬೆಳವಣಿಗೆಯಿಂದ ಎಲ್ಲರ ಆಕರ್ಷಣೆಯಾಗಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ವಿಶ್ವವಿದ್ಯಾಲಯಕ್ಕೆ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ನಾಮಕರಣವಾದ ಸಂತಸದ ಪ್ರಸಂಗದಲ್ಲಿ ನಾವು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರನ್ನು ನಮಿಸೋಣ. ಪ್ರಪಂಚದ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿಗೆ ಭಾಜನರಾಗಿರುವ ಡಾ. ಅಂಬೇಡ್ಕರ ಜೊತೆಗೆ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ, ಪಂಡಿತ ಜವಾಹರಲಾಲ ನೆಹರು, ಸರ್ದಾರ ವಲ್ಲಭಬಾಯಿ ಪಟೇಲ ಸೇರಿ 300ಕ್ಕೂ ಅಧಿಕ ಪ್ರತಿಭಾವಂತ ಪಂಡಿತರನ್ನು ಅವರ ಅವಿರತ ಶ್ರಮಕ್ಕೆ ಭೌದ್ಧಿಕ ಕೊಡುಗೆಗೆ ಅವರ ತಪಸ್ವಿ ಸ್ವಭಾವಕ್ಕೆ ಮಣಿದು ಸ್ಮರಿಸಿ ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯಲು ಕಂಕಣ ಬದ್ಧರಾಗೋಣ ಎಂದರು.

ಕಲೆ, ಸಾಹಿತ್ಯ, ಸಂಸ್ಕöÈತಿ, ಆಧ್ಯಾತ್ಮ, ಸಂಗೀತ, ವಾಸ್ತುಶಿಲ್ಪ, ಶಿಲ್ಪಕಲೆ, ಚಿತ್ರಕಲೆ, ಸಹಕಾರ, ಔಧ್ಯಮಿಕ ಕ್ಷೇತ್ರಗಳಲ್ಲಿ ವಿಶಿಷ್ಠ ಸ್ಥಾನ ಪಡೆದಿರುವ ಗದಗ ಪರಿಸರದಲ್ಲಿ ಸಂಗೀತ ನಿನಾದಿಸುತ್ತಿದೆ. ನಮ್ಮ ಜಿಲ್ಲೆಯ ಗಾಳಿಯಲ್ಲಿ ವಿದ್ಯುತ್ ಇದೆ. ಗಣಿಗಳಲ್ಲಿ ಬಂಗಾರವಿದೆ. ಇಲ್ಲಿಯ ದೇವಾಲಯಗಳು, ಬಸದಿಗಳು, ದರ್ಗಾಗಳು ಹಾಗೂ ಅನೇಕ ಪ್ರಾಚೀನ ಸ್ಮಾರಕಗಳಿವೆ. ಖ್ಯಾತಿವೆತ್ತ ಕಲಾವಿದರ ನೆಲೆಬೀಡಾಗಿದೆ. ಸಾಂಸ್ಕöÈತಿಕ ವೈಭವ ಸಾರುವ ಈ ಪರಿಸರ ಐತಿಹಾಸಿಕ, ಪಾರಂಪಾರಿಕ, ನೆಲಗಳನ್ನೊಳಗೊಂಡಿದೆ. ಇಲ್ಲಿ ಧರ್ಮ ಸಮನ್ವಯತೆ ಇದೆ, ಸಾಮರಸ್ಯವಿದೆ. ಇಲ್ಲಿ ಬಂಧುತ್ವ ಬಲಗೊಂಡಿದೆ. ಪ್ರೀತಿ- ಸ್ನೇಹ ಬೆಸೆಗೊಂಡಿದೆ. ಪುರಾತತ್ವದ ನೆಲೆಗಳಿವೆ. ಆಧುನಿಕತೆ ತೆರೆದುಕೊಂಡಿದೆ. ಕೆ.ಜಿ.ಯಿಂದ ಪಿ.ಜಿ.ಯ ಎಲ್ಲ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದು ಸಹಕಾರದ ಗಂಗೋತ್ರಿ, ಒಟ್ಟಿನಲ್ಲಿ ಗದಗ, ರಾಜ್ಯದ ಸಾಂಸ್ಕöÈತಿಕ, ಸಾಹಿತ್ಯಕ ರಾಜಧಾನಿಯಾಗಿದೆ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ