ಗದಗ ; ಗ್ರಾಮಾಂತರ ಬಡವರ ರೈತರ ಸೇವೆಗೆ ನಿರಂತರವಾಗಿ ಹುಲಕೋಟಿಯ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಆ ನಿಟ್ಟಿನಲ್ಲಿ ಮುಂದುವರೆದು ಬಡವರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ನೂತನವಾಗಿ ಮೂರು ಹೊಸ ಆವಿಷ್ಕಾರಗಳನ್ನು ಉದ್ಘಾಟಿ ಸುತ್ತಿರುವುದು ಸಂತಸ ತಂದಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ, ಶಾಸನ ರಚನೆ, ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ ಹೇಳಿದರು.
ಹುಲಕೋಟಿಯ ಸ್ವಾಮಿ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ, ಕೆಎಚ್ ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನರರೋಗ ಶಸ್ತ್ರಚಿಕಿತ್ಸೆ, ಕೀಲು ಜೋಡಣೆ ಹಾಗೂ ಕೃಮಾ ಕೇರ್ ಯೂನಿಟ್ ಉದ್ಘಾಟಿಸಿ ಮಾತನಾಡಿದ ಅವರು ಕೆ ಹೆಚ್ ಪಾಟೀಲರ ಕನಸು ನನಸಾಗುವ ದೃಷ್ಟಿಯಿಂದ ಯುವಕರ ತಂಡ ಹತ್ತಾರು ಹೊಸ ಯೋಜನೆಗಳ ಮೂಲಕ ಸಾಮಾಜಿಕ ಕಾರ್ಯ ಕೈಗೊಳ್ಳುತ್ತಿರುವುದು ಶ್ಲಾಗನೀಯವಾಗಿದೆ ಎಂದರು.
ಕೆ ಹೆಚ್ ಪಾಟೀಲ್ ಪ್ರತಿಷ್ಠಾನದ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಸಹಯೋಗದಲ್ಲಿ ಕಟ್ಟಕಡೆಯ ಬಡವರಿಗೂ ಶುದ್ಧ ಕುಡಿಯುವ ನೀರು ಒದಗಿಸಿದೆ ಅಲ್ಲದೆ ಕೊರೊನಾ ಸಂದರ್ಭದಲ್ಲಿ ಈ ಸಂಸ್ಥೆ ಸ್ವಯಂ ಪ್ರೇರಣೆಯಿಂದ ಇಲ್ಲಿನ ವೈದ್ಯರು ಸಿಬ್ಬಂದಿ ಕೈಗೊಂಡ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಸೇವಾ ತಂಡದ ಮೂಲಕ ಲಕ್ಷಾಂತರ ಜನರಿಗೆ ಆರೋಗ್ಯ ತಪಾಸಣೆ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಚಸ್ಮಾ ವಿತರಣೆ ಸೇರಿದಂತೆ ಗಂಭೀರ ಹೃದಯ ಕಾಯಿಲೆಗಳಿಗೂ ಬಡವರ ಮನೆ ಬಾಡಿಗೆ ಬಂದು ಸೇವಿ ಸಲ್ಲಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ ಇಂದು ಪರಿಣಿತ ವೈದ್ಯರ ತಂಡ ಸಮಾಜಕ್ಕೆ ರೈತ ಕುಟುಂಬಕ್ಕೆ ಹೆಚ್ಚು ಜನರಿಗೆ ಅನುಕೂಲವಾದ ದೃಷ್ಟಿಯಿಂದ ನೀವು ಕೈಗೊಳ್ಳುತ್ತಿರುವ ರಚನಾತ್ಮಕ ಕಾರ್ಯ ವಿಶೇಷವಾಗಿದೆ ಎಂದರು.
ಜನಕಲ್ಯಾಣದ ದೃಷ್ಟಿಯಿಂದ ಒಂದು ಸರ್ಕಾರ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುವ ಮೂಲಕ ಕೆ ಹೆಚ್ ಪಾಟೀಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಎಲ್ಲ ಸಂಸ್ಥೆಗಳಿಗಿಂತ ಮಿಗಿಲಾಗಿ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ನೂರಕ್ಕೆ ನೂರು ಕೈಗೊಂಡ ಕಾರ್ಯಗಳು ನೆರವೇರಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಮಾಜಿ ಶಾಸಕರಾದ ಡಿ ಆರ್ ಪಾಟೀಲ ಮಾತನಾಡಿ ಗ್ರಾಮಾಂತರ ಭಾಗದಲ್ಲಿ ವೈದ್ಯಕೀಯ ಶಿಕ್ಷಣ ವಸತಿ ಸೇರಿದಂತೆ ಎಲ್ಲ ಬಗೆ ಸವಲತ್ತುಗಳನ್ನು ಜನರಿಗೆ ನೀಡುವ ನಿಟ್ಟಿನಲ್ಲಿ ಸಮಾನ ಮನಸ್ಸಕರ ಬಳಗವನ್ನು ಕಟ್ಟಿಕೊಂಡು ಕೆ ಎಚ್ ಪಾಟೀಲರ ಕನಸು ನನಸಾಗಿಸುವ ನಿಟ್ಟಿನಲ್ಲಿ ಎಚ್ ಕೆ ಪಾಟೀಲರು ಹಗಲು ರಾತ್ರಿ ಎನ್ನದೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು ಎಚ್ ಕೆ ಪಾಟೀಲರು ಮಾಡುವ ಕೆಲಸ ಆರು ಸಮಾಜದ ಬಡವರ ಸರ್ವಾಂಗಿನ ಅಭಿವೃದ್ಧಿಗೆ ನೆರವಾಗಲಿದೆ ಎಂದರು.
ಡಾ; ಎಸ್ . ಆರ್. ನಾಗನೂರ ಸೇವೆ ಅಪಾರ ಇಂದು ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಇಷ್ಟು ಹೇಮರವಾಗಿ ಬೆಳೆಯಲು ಡಾ. ಎಸ್ ಆರ್ ನಾಗನೂರು ಕೊಡುಗೆ ಅಪಾರವಾದದ್ದು ಆ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನಾಗನೂರಿಯಿಂದ ಇಂದು ಹೊಸ ಹೊಸ ಆವಿಷ್ಕಾರಗಳನ್ನು ಅನಾವರಣ ಗೊಳಿಸಲು ಸಾಧ್ಯವಾಗಿದೆ. ಅಲ್ಲದೆ ಈ ಸಂಸ್ಥೆಯ ಬೆಳವಣಿಗೆಗಾಗಿ ಹಗಲಿರುಳು ಎನ್ನದೆ ಕ್ರಿಯಾಶೀಲವಾಗಿ ಕಾರುಣ್ಣಿಮೆ ನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ, ವೇಮನ ಸಾಹುಕಾರ, ಡಾ; ಅರವಿಂದ ಪಾಟೀಲ, ಡಾ; ವಿನಾಯಕ, ಡಾ; ಸಿದ್ಧಾರ್ಥ, ಅಕ್ಬರ್ ಸಾಬ್ ಪೊಗರ್ಚಿ, ಅಶೋಕ್ ಮಂದಾಲಿ ಸೇರಿದಂತೆ ಮತ್ತು ಇತರರು ಇದ್ದರು.