ಗದಗ ಜನವರಿ 24 : ಗದಗ ಬೆಟಗೇರಿ ಶಹರದ ಜನತೆಗೆ ತಿಳಿಯಪಡಿಸುವುದೇನೆಂದರೆ ಅಂಜುಮನ್ ಎ ಇಸ್ಲಾಂ ಗದಗ -ಬೆಟಗೇರಿ ವಕ್ಫ್ ಸಂಸ್ಥೆಯ ಚುನಾವಣೆಯ ಪ್ರಯುಕ್ತ ಸಾಮಾನ್ಯ ಸದಸ್ಯರ ನೊಂದಣಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಸದರಿ ಅಧಿಸೂಚನೆಯಂತೆ ಸಾಮಾನ್ಯ ಸದಸ್ಯರ ನೋಂದಣಿಯ ಅರ್ಜಿಯನ್ನು ಸಲ್ಲಿಸಲು ಅಂಜುಮನ್ ಎ ಇಸ್ಲಾಂ ಕಚೇರಿ, ಮಸ್ಜಿದ್ ಎ ಆಯೇಶಾ ಆಶ್ರಯಾ ಕಾಲೋನಿ, ಎಸ್.ಎಂ. ಕೃಷ್ಣ ನಗರ, ಗದಗ ಬೆಟಗೇರಿಯಲ್ಲಿ ಜನೆವರಿ 27 ರಿಂದ ಫೆಬ್ರುವರಿ 20 ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಶುಲ್ಕ 250 ಇರುತ್ತದೆ ಎಂದು ಗದಗ ಬೆಟಗೇರಿಯ ಅಂಜುಮನ್ ಎ ಇಸ್ಲಾಂ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.