ರೋಣ :- ಶಿಕ್ಷಣ ಕಲಿಯುವಾಗಲೇ ವಿಧ್ಯಾರ್ಥಿಗಳು ದೊಡ್ಡ ಮಟ್ಟದ ಕನಸು ಕಾಣಬೇಕು, ಆ ಕನಸ್ಸನ್ನು ನನಸು ಮಾಡಿಕೊಳ್ಳಲು ನಿರಂತರವಾದ ಪರಿಶ್ರಮದ ಜೊತೆಗೆ ಅಭ್ಯಾಸ ಮುಖ್ಯ ವಾಗುತ್ತದೆ, ಆ ಅಭ್ಯಾಸವನ್ನು ನೀವು ಮುಂದುವರಿಸಿದ್ದಾದಲ್ಲಿ ನಿಮಗೆ ಯಶಸ್ಸು ಖಂಡಿತವಾಗಿ ದೊರಕುತ್ತದೆ ಅಂತಾ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ಹೇಳಿದರು..
ತಾಲೂಕಿನ ಮೆಣಸಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ರಾತ್ರಿ 8 ಘಂಟೆ ಸಮಯದಲ್ಲಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಭೇಟಿ ನೀಡಿದ ಅವರು ವಸತಿಯಲ್ಲಿನ ಕುಂದು ಕೊರತೆ ಸೇರಿದಂತೆ ಊಟದ ಗುಣಮಟ್ಟದ ಕುರಿತು ವಿಧ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು..
ವಸತಿ ನಿಲಯದ ಮಕ್ಕಳಿಗೆ ಒಂದು ಘಂಟೆಗಳ ಕಾಲ ಗಣಿತ ವಿಷಯದ ಕುರಿತು ಕ್ಲಾಸ್ ತೆಗೆದುಕೊಂಡು ವಿಧ್ಯಾರ್ಥಿಗಳಿಗೆ ಪಾಠ ಮಾಡಿದರು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಎದುರಿಸಬೇಕಾದ ಸಮಯ, ವಿಷಯಗಳ ಆಯ್ಕೆ, ಯಾವ ದಿನ ಪತ್ರಿಕೆಗಳಲ್ಲಿ ಯಾವ ವಿಷಯವನ್ನು ಹೆಚ್ಚು ಅಭ್ಯಾಸ ಮಾಡಬೇಕು, ಮುಂಜಾನೆ ಎಷ್ಟು ಘಂಟೆಗೆ ಅಭ್ಯಾಸ ಪ್ರಾರಂಭಿಸಬೇಕು, ಹೀಗೆ ಹಲವಾರು ವಿಷಯಗಳ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು ಕಲಿಕೆಯಲ್ಲಿ ಹೆಚ್ಚು ತೊಡಗಿಸಕೊಳ್ಳಲು ಸಲಹೆ ನೀಡಿದರು. ತದನಂತರ ವಿದ್ಯಾರ್ಥಿಗಳೊಂದಿಗೆ ಸರತಿ ಸಾಲಿನಲ್ಲಿ ಕುಳಿತು ಉಟ ಮಾಡಿದ ಅವರು ವಸತಿ ನಿಲಯದ ಮೇಲ್ವಿಚಾರಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲು ಸೂಚಿಸಿದರು. ವಸತಿ ನಿಲಯದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಿ ಚೆಕ್ಕಬಂದಿ ಮತ್ತು ಉತಾರ ನೀಡಲು ಪಿ.ಡಿ.ಓ ರವರಿಗೆ ಸೂಚಿಸಿದರು..
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,,DEO,TC,TAE ಮತ್ತು ಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು…