ಗದಗ ಡಿಸೆಂಬರ್ ೨೧ : ವಿಶ್ವ ಆರೋಗ್ಯ ಸಂಸ್ಥೆಯು ಧ್ಯಾನ ಹಾಗೂ ಯೋಗದಿಂದ ವ್ಯಕ್ತಿ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಿ, ಅದರಿಂದ ಆಗುವ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ ೨೧, ೨೦೨೪ ರಿಂದ ಪ್ರತಿ ವರ್ಷ ಇಂಟರ್ ನ್ಯಾಶನಲ್ ಮೆಡಿಟೇಷನ್ ಡೇ ಎಂದು ಆಚರಿಸಬೇಕೆಂದು ಘೋಷಿಸಿದೆ. .
ಈ ನಿಟ್ಟಿನಲ್ಲಿ ಗದಗ ಜಿಲ್ಲೆಯ ಪೊಲೀಸ ಇಲಾಖೆಯಿಂದ ಶನಿವಾರ ಜಿಲ್ಲಾ ಸಂಭಾಪುರ ರಸ್ತೆಯಲ್ಲಿನ ಪೊಲೀಸ ಭವನದಲ್ಲಿ ವಿಶ್ವ ಧ್ಯಾನ ದಿನಾಚರಣೆಯನ್ನು ಆಯೋಜಿಸಲಾಯಿತು. ವಾಲಿ ಗುರೂಜಿ ಅವರು ವಿಶ್ವ ಧ್ಯಾನ ದಿನಾಚರಣೆ ಕುರಿತು ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ ಅಧೀಕ್ಷಕ ಐಪಿಎಸ್ ಬಿ.ಎಸ್.ನೇಮಗೌಡ, ಹೆಚ್ಚುವರಿ ಪೊಲೀಸ ಅಧೀಕ್ಷಕ ಎಂ.ಬಿ.ಸಂಕದ, ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳು ಉಪಸ್ಥಿತರಿದ್ದರು.