ಗದಗ : ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಂಡು ಪ್ರತಿಯೊಬ್ಬರಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸಿ. ಆರ್. ಮುಂಡರಗಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಗದಗ ಇವರ ಸಹಯೋಗದಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜೀವಿಸುತ್ತಿದ್ದು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆರ್ ಎಸ್ ಬುರುಡಿ ಅವರು ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕ ಓದುವುದು, ಪರೀಕ್ಷೆ ಎದುರಿಸುವುದು ಎಂದು ಅರ್ಥ ಅಲ್ಲ. ತಾವು ಉತ್ತಮ ಸಮಾಜ, ವ್ಯಕ್ತಿತ್ವ ನಿರ್ಮಾಣ ಮಾಡುವುದೇ ಶಿಕ್ಷಣದ ಗುರಿ ಆಗಬೇಕು. ಮುಂದೊAದು ದಿನ ತಾವು ಉನ್ನತವಾದ ಸ್ಥಾನ ಅಲಂಕರಿಸಲು ಈಗಿನಿಂದಲೇ ತಾವು ಅಚಲ ನಿರ್ಧಾರದೊಂದಿಗೆ ಓದಿನ ಕಡೆ, ಅಭ್ಯಾಸದ ಕಡೆ ಗಮನ ಕೊಡಬೇಕು ಎಂದರು.
ನೊಡಲ್ ಅಧಿಕಾರಿ ಶಿವಕುಮಾರ ಕುರಿ ಪ್ರಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಜನವರಿ 25ರಂದು ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಆಚರಿಸುತ್ತೇವೆ. ವಿದ್ಯಾರ್ಥಿಗಳು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟçವನ್ನು ಕಟ್ಟುವ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣೆ, ಮತದಾನದ ಮಹತ್ವವನ್ನು ತಿಳಿಯಬೇಕೆಂಬುದು ಇದರ ಆಶಯ ಎಂದರು.
ಪ್ರಬAಧ (ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ) ಸ್ಪರ್ಧೆಗಳು ನಡೆದವು. ಭಿತ್ತಿ ಚಿತ್ರ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ಜರುಗಿದವು. ರಸಪ್ರಶ್ನೆಯು ಥಟ್ ಅಂತ ಹೇಳಿ ಮಾದರಿಯಲ್ಲಿ ನಡೆದಿರುವುದು ಎಲ್ಲಾ ವಿದ್ಯಾರ್ಥಿಗಳ ಮತ್ತು ಪಾಲಕರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ನಿರ್ಣಾಯಕರಾಗಿ ನುರಿತ ಶಿಕ್ಷಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಿರೂಪಣೆಯನ್ನು ಎಂ ಎ ಯರಗುಡಿ ಹಾಗೂ ವಂದನಾರ್ಪಣೆಯನ್ನು ಎಂ ಬಿ ಕರಡ್ಡಿ ಮಾಡಿದರು.
ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದಲ್ಲಿ ಏರ್ಪಡಿಸಿದ ಸ್ಪರ್ಧೆಗಳ ಫಲಿತಾಂಶ ವಿವರ*
ಪ್ರಬಂಧ ಸ್ಪರ್ಧೇಯಲ್ಲಿ (ಕನ್ನಡ) ಪೂರ್ಣಿಮಾ ಅನವಾಲ ಪ್ರಥಮ,ಸೌಮ್ಯ ಕಿತ್ತೂರು ದ್ವಿತೀಯ, ಮಂಜುಳಾ ಹಿರೇಮಠ ತೃತೀಯ ಸ್ಥಾನ ಪಡೆದಿದ್ದಾರೆ.
ಪ್ರಬಂಧ ಸ್ಪರ್ಧೆಯಲ್ಲಿ (ಇಂಗ್ಲಿಷ್) ಶ್ರೇಯಾ ಚಿಕ್ಕರಡ್ಡಿ ಪ್ರಥಮ,ನೀವೇದಿತಾ ಹಂದ್ರಾಳ ದ್ವಿತೀಯ, ಸುಮಲತಾ ಕಬ್ಬೇರಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ರೇವಂತರೆಡ್ಡಿ ಮುಂಡರಗಿ ಹಾಗು ಶಾಂತಮ್ಮ ಸಜ್ಜನರ ಪ್ರಥಮ ಸ್ಥಾನ,ಶಿದ್ಧಮ್ಮ ಹಳೆಮನಿ,ಸೌಂದರ್ಯ ಮನವಾಚಾರಿ ದ್ವೀತಿಯ ಹಾಗು ನಿಖಿತಾ ಮಾಲಿಪಾಟೀಲ ಕವಿತಾ ತಳವಾರ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಬಿತ್ತಿ ಚಿತ್ರ ಸ್ಪರ್ಧೆಯಲ್ಲಿ ಈಶ್ವರ ಹೂಗಾರ ಪ್ರಥಮ, ಖದಿಜಾ ಸೂರಣಗಿ ದ್ವಿತೀಯ, ಕೌಸರಬಾನು ನದಾಫ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.