ಗದಗ ಆದೇಶದನ್ವಯ ಗದಗ ಜಿಲ್ಲೆಯ ಲಕ್ಕುಂಡಿ-2, ಕೊಂಚಿಗೇರಿ, ರಣತೂರ, ವಡವಿ, ಇಟಗಿ, ಡಂಬಳ, ಕದಾಂಪೂರ, ಕೊತಬಾಳ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ನವೆಂಬರ್ 6 ಆಗಿದ್ದು ನವೆಂಬರ್ 12 ರೊಳಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ನವೆಂಬರ್ 13 ರಂದು ಪರಿಶೀಲಿಸಲಾಗುವುದು. ನವೆಂಬರ್ 15 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನವಾಗಿದ್ದು ಮತದಾನವನ್ನು ನವೆಂಬರ್ 23 ರಂದು ಬೆ. 7 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮತಗಳ ಎಣಿಕೆಯು ನವೆಂಬರ್ 26 ರಂದು ಬೆ 8 ಗಂಟೆಯಿAದ ನಡೆಯಲಿದ್ದು ಅದೇ ದಿನ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ನವೆಂಬರ್ 6 ರಿಂದ ಜಾರಿಯಲ್ಲಿ ಬರಲಿದ್ದು ನವೆಂಬರ್ 26 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.