14.4 C
New York
Friday, May 9, 2025

Buy now

spot_img

ಗದಗ : 69ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಗಮನ ಸೆಳೆದ ಪಥ ಸಂಚಲನ

ಗದಗ  ನವ್ಹೆಂಬರ್ 1 : ಗದುಗಿನ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು 69ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ರಾಷ್ಟ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತç ಮೀಸಲು ಪಡೆಯ ಪರೇಡ ಕಮಾಂಡರ್ ವಿದ್ಯಾನಂದ ನಾಯಕ ನೇತೃತ್ವವನ್ನು ಅವರು ವಹಿಸಿದ್ದರು. ಜಿಲ್ಲಾ ಸಶಸ್ತç ಮೀಸಲು ಪೊಲೀಸ ಪಡೆಯ ನೇತೃತ್ವವನ್ನು ಆರ್.ಎಸ್.ಐ ಸತೀಶ ಠಕ್ಕಳಕ್ಕಿ ವಹಿಸಿದ್ದರು. ನಾಗರಿಕ ಪೊಲೀಸ ಪಡೆಯ ನೇತೃತ್ವವನ್ನು ಗದಗ ಗ್ರಾಮೀಣ ಘಟಕದ ಪಿಎಸ್‌ಐ ಕಿರಣ ಕೋಣನಕೇರಿ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್.ವಸ್ತçದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಲೋಕೇಶ ಎಫ್.ಎಸ್.ಒ, ಅಬಕಾರಿ ದಳದ ನೇತೃತ್ವವನ್ನು ಶ್ರೀಮತಿ ವಿಜಯಲಕ್ಷಿö್ಮÃ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಓ ಸಚಿನ ಬಿಸನಳ್ಳಿ, 38 ಕೆಎಆರ್ ಬಟಾಲಿನ್ ಗದಗನ ನೇತೃತ್ವವನ್ನು ಕುಮಾರಿ ನೀಲಮ್ಮ ಕರಡಿ, ನಗರದ ಎಸ್.ಎಂ.ಕೃಷ್ಣಾ ನಗರದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ನೇತೃತ್ವವನ್ನು ಕುಮಾರಿ ಅಂಜನಾ, ಬೆಟಗೇರಿಯ ಸೇಂಟ್ ಜಾನ್ ಪ್ರೌಢಶಾಲೆಯ ನೇತೃತ್ವವನ್ನು ಕುಮಾರ್ ಸೋಮಶೇಖರ, ವಿ.ಡಿ.ಎಸ್.ಟಿ.ಸಿ. ಬಾಲಕಿಯರ ಪ್ರೌಢಶಾಲೆಯ ನೇತೃತ್ವವನ್ನು ಕುಮಾರಿ ಗೌರಿ, ಎಸ್.ಎಂ.ಕೃಷ್ಣಾ ನಗರದ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ನೇತೃತ್ವನವನು ಕುಮಾರಿ ಸ್ನೇಹಾ, 38 ಕೆಎಆರ್ ಬಟಾಲಿನ್ ಎನ್.ಸಿ.ಸಿ ಸೀನಿರ‍್ಸ್ ಗದಗನ ನೇತೃತ್ವವನ್ನು ಕುಮಾರ ಗುರುಪ್ರಸಾದ, ಕೆ.ಎಲ್.ಇ ಪ್ರೌಢ ಶಾಲೆ ನೇತೃತ್ವವನ್ನು ಕುಮಾರಿ ಜುಬೇರಿಯಾ ವಹಿಸಿದ್ದರು. ಪಥ ಸಂಚಲನದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಸಚಿವರು ಸನ್ಮಾನಿಸಿದರು.

69ನೆಯ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಸೇರಿದಂತೆ ಇತರೆ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು.

ಸನ್ಮಾನಿತರು:

ಜಾನಪದ, ಸಂಗೀತ, ನಾಟಕ, ಬಯಲಾಟ, ಲಲಿತಕಲೆ, ಸಾಹಿತ್ಯ, ಸಾಮಾಜಿಕ ರಂಗಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ನೃತ್ಯ ಅಕಾಡೆಮಿಯಿಂದ ನೀಡಲಾಗುವ 2024 ನೇ ಸಾಲಿನ ಕವಿ ಕುಮಾರವ್ಯಾಸ ಪ್ರಶಸ್ತಿ ಪಡೆದಿದ್ದಕ್ಕಾಗಿ ಸಿದ್ದೇಶ್ವರ ಶಾಸ್ತಿçà ತೆಲ್ಲೂರು, ಸುಮಾರು 25 ವರ್ಷಗಳಿಂದ ಶಿಲ್ಪಕಲಾ ಕ್ಷೇತ್ರದಲ್ಲಿ : ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು, ನವಂಬರ್ 01 2023 ರಂದು ನಡೆದ ಕರ್ನಾಟಕ ಸಂಭ್ರಮ-50 ರ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳಿಗೆ ನೀಡಿದ ತಾಯಿ ಭುವನೇಶ್ವರ ಮೂರ್ತಿಯನ್ನು ತಯಾರಿಸಿದ್ದಕ್ಕಾಗಿ ರೋಣದ ಶಂಕ್ರಪ್ಪ ದೇವಪ್ಪ ಬಡಿಗೇರ, ಅಂತರಾಷ್ಟಿçÃಯ ಮಹಿಳಾ ದಿನಚರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದಕ್ಕಾಗಿ 2023- 24 ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಕ್ಕಾಗಿ ಶ್ರೀಮತಿ ವಿ.ವಿ. ಹಿರೇಮಠ, ಸುಮಾರು 30 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ ಶ್ರೀಮತಿ ಉಷಾ ಕಾರಂತ, ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿದ್ದಸಿದ್ದಕ್ಕಾಗಿ ಡಾ.ಎಸ್.ಸಿ. ಚವಡಿ ಅವರುಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಮಾಧ್ಯಮ ವಿಭಾಗ : ಕನ್ನಡ ನಾಡು ನುಡಿ ಕುರಿತು ಉತ್ತಮ ವರದಿಗಳನ್ನು ಮಾಡಿ ತಮ್ಮದೇ ಸೇವೆ ಸಲ್ಲಿಸಿದ್ದಕ್ಕಾಗಿ ಗದಗ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರ ಸೂರ್ಯನಾರಾಯಣ ನರಗುಂದಕರ, ಹೊಸದಿಗಂತ ದಿನಪತ್ರಿಕೆ ವರದಿಗಾರ ವೆಂಕಟೇಶ ಇಮ್ರಾಪೂರ, ಸುವರ್ಣ ಟಿ.ವಿ ವರದಿಗಾರ ಗಿರೀಶ ಕಮ್ಮಾರ, ಮುಳಗುಂದ ವಿಜಯವಾಣಿ ವರದಿಗಾರ ವಿ.ಡಿ. ಕಣವಿ, ಮುಂಡರಗಿ ಪ್ರಜಾವಾಣಿ ವರದಿಗಾರ ಕಾಶಿನಾಥ ಬಿಳಿಮಗ್ಗದ, ಶಿರಹಟ್ಟಿ ಕಿತ್ತೂರು ಕರ್ನಾಟಕ ವರದಿಗಾರ ಎ.ಎಚ್.ಖಾಜಿ, ಗದಗ ಉದಯವಾಣಿ ವರದಿಗಾರ ಅರುಣಕುಮಾರ ಹೀರೆಮಠ, ಕಿತ್ತರೂಕರ್ನಾಟಕ ದಿನ ಪತ್ರಿಕೆ ಛಾಯಗ್ರಾಹಕ ಎಚ್ಚರಪ್ಪ ಮಹೇಂದ್ರಕರ ಇವರ ಸೇವೆಯನ್ನು ಗುರುತಿಸಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಸಮಾಜ ಸೇವೆ ಹಾಗೂ ಸಹಕಾರ ಕ್ಷೇತ್ರ : ಕುರ್ತಕೋಟಿಯ ಅಪ್ಪಣ್ಣ ಇನಾಮತಿ, ಗದಗಿನ ಚಂದ್ರಗೌಡ ಮರಿಯಪ್ಪಗೌಡರ, ವಿರೇಂದ್ರ ಹೂಲಿ, ಕುರ್ತಕೋಟಿ ಅಲ್ಲಾಭಕ್ಷ ತಹಶೀಲದಾರ, ಗದಗನ ಬಾಲಚಂದ್ರ ಭರಮಗೌಡರ, ರಾಜೀವಗಾಂಧಿ ನಗರದ ಉಮೇಶ ಮಲ್ಲಪ್ಪ ಹಡಪದ ಅವರುಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಶಿಕ್ಷಣ ಮತ್ತು ಕ್ರೀಡಾ ವಿಭಾಗ: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಕೆಂಚನಗೌಡರ, ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಜರುಗಿದ ಪ್ರಬಂಧ ಸ್ಪರ್ಧೆಯಲ್ಲಿ ಪದವಿ ಪೂರ್ವ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗದಗ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜಯಕುಮಾರ ದೊಡ್ಡಮನಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಪ್ರಣತಿ ಆರ್. ಗಡಾದ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಹರೀಶ್ ಮುಟಗಾರ್, ಕುಸ್ತಿ ಕ್ರೀಡೆಯಲ್ಲಿ ಸಾಧನೆಗೈದ ವೈಷ್ಣವಿ ಇಮ್ಮಡಿಯವರ ಹಾಗೂ ವರಲಕ್ಷಿ÷್ಮ ಕದಡಿ, ಸಮಾಜಕಿಕ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಗೈದ ಅರ್ಮಾನ್ ತಾಜುದ್ದೀನ್ ವಡಗೇರ ಅವರನ್ನು ಸನ್ಮಾನಿಸಲಾಯಿತು.

ಸ್ಥಬ್ಧ ಚಿತ್ರ: ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ, ಕೆ ಎಸ್ ಆರ್ ಟಿ ಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗದಗ ಬೆಟಗೇರಿ ನಗರಸಭೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಗಳಿಂದ ವಿವಿಧ ಯೋಜನೆಗಳ ಸ್ಥಬ್ಧ ಚಿತ್ರಗಳನ್ನು ರೂಪಿಸಿ ಪ್ರದರ್ಶಿಸಲಾಯಿತು. ಇವುಗಳಲ್ಲಿ ಏನ್ ಡಬ್ಲೂ÷್ಯ ಕೆ ಎಸ್ ಆರ್ ಟಿ ಸಿ ನಿರ್ಮಿಸಿದ ಸಬರಮತಿ ಆಶ್ರಮದ ಸ್ಥಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದ್ವಿತೀಯ ಬಹುಮಾನ ಹಾಗೂ ಶಿಕ್ಷಣ ಇಲಾಖೆ ನಿರ್ಮಿಸಿದ ಸ್ಥಬ್ಧ ಚಿತ್ರಗಳು ತೃತೀಯ ಬಹುಮಾನ ಪಡೆದವು.

ಸಾಂಸ್ಕöÈತಿಕ ಕಾರ್ಯಕ್ರಮ: ವಿವಿಧ ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ ನಗರದ ಸಿ ಡಿ ಓ ಜೈನ್ ಪ್ರೌಢಶಾಲೆ ಪ್ರಥಮ ಸ್ಥಾನ ಲೋಯಲಾ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಹಾಗೂ ಸೇಂಟ್ ಜಾನ್ ಪ್ರಾಥಮಿಕ ಶಾಲೆಯು ತೃತೀಯ ಬಹುಮಾನ ಪಡೆಯಿತು.

ಉಪಸ್ಥಿತಿ: ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ