ಗದಗ ಅಕ್ಟೋಬರ್ 3; ಗದಗ ಜಿಲ್ಲೆಯಲ್ಲಿ ದಿನಾಂಕ:01-01-2025 ರಿಂದ 31-12-2025 ರವರೆಗೆ ಆಡಳಿತ ಮಂಡಳಿಗೆ ಅವಧಿ ಕೊನೆಗೊಳ್ಳುವ ಎಲ್ಲಾ ವಿಧದ ಸಹಕಾರ / ಸಹಕಾರಿಗಳು/ ಬ್ಯಾಂಕುಗಳ ಚುನಾವಣೆ ಜರುಗಿಸುವುದು ಅವಶ್ಯವಿದ್ದು, ಆಯಾ ಸಂಘ / ಬ್ಯಾಂಕ್/ ಸಹಕಾರಿಗಳ ಮುಖ್ಯ ಕಾರ್ಯನಿವಾಹಕರು ಕೂಡಲೇ ರಿಟರ್ನಿಂಗ್ ಅಧಿಕಾರಿಗಳ ನೇಮಕಾತಿಗಾಗಿ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಸಹಕಾರ ಸಂಘಗಳ ಉಪ/ಸಹಾಯಕ ನಿಬಂಧಕರ ಕಚೇರಿ ಗದಗ ಈ ಕಚೇರಿಗಳಿಗೆ 04 ತಿಂಗಳುಗಳ ಮೊದಲೇ ಸಲ್ಲಿಸಬೇಕು.
ಗದಗ : ಸಹಕಾರ ಸಂಘಗಳ ಗಮನಕ್ಕೆ
ಕರ್ನಾಟಕ ಸಹಕಾರ ಸಂಘಗಳ ಹಾಗೂ ಸೌಹಾರ್ದ ಕಾಯ್ದೆಯಡಿ ಇತ್ತೀಚಿನ ತಿದ್ದುಪಡಿ ಅನುಸಾರ ಉಪನಿಯಮಗಳನ್ನು ತಿದ್ದುಪಡಿ ಮಾಡಿಕೊಂಡು ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಜಿಲ್ಲಾಡಳಿತ ಭವನ ಕೊಠಡಿ ಸಂಖ್ಯೆ-125 ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಎ.ಪಿ.ಎಂ.ಸಿ ಯಾರ್ಡ, ಎಸ್.ಬಿ.ಆಯ್ ಮುಖ್ಯ ಶಾಖೆ ಎದುರಿಗೆ, ಗದಗ ಕಚೇರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.