ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್

ಅಡವಿಸೋಮಾಪೂರ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಕ್ಕೆ ಚಾಲನೆ

ಗದಗ ಸ.18: ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಂ ಪಂಚಾಯತ ಅಧ್ಯಕ್ಷರಾದ ಕೀರ್ತಿ ಪ್ರಶಾಂತಗೌಡ ಪಾಟೀಲ್ ಪ್ರತಿಯೊಬ್ಬರು ನಿಮ್ಮ ಮನೆ ಹಾಗೂ ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟಾಗ ಮಾತ್ರ ನಿಮ್ಮ ಆರೋಗ್ಯ ಸ್ವಂತವಾಗಿರುತ್ತದೆ ಗ್ರಾಮ ಸುಂದರವಾಗಿ ಕಾಣಲು ಸಾಧ್ಯ ಹಾಗಾಗಿ, ತಾವೆಲ್ಲರೂ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿ ಎಂದು ಹೇಳಿದರು.

ಅಡವಿಸೋಮಾಪೂರ ಗ್ರಾಂ ಪಂಚಾಯತ ಮುಂಭಾಗದ ರಸ್ತೆಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ ಸ್ವಚ್ಛತಾ ಹಿ ಸೇವಾ ಜನಾಂದೋಲನಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ವರ್ಷ ಸ್ವಚ್ಛ ಭಾರತ ಅಭಿಯಾನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಅಡವಿಸೋಮಾಪೂರ ಗ್ರಾಂ ಪಂಚಾಯತ ವ್ಯಾಪ್ತಿಯಲ್ಲಿ ಅಕ್ಟೋಬರ್ 2 , ರವರಗೆ ಆಚರಿಸಲಾಗುತ್ತಿದೆ .

ಅಡವಿಸೋಮಾಪೂರ ಗ್ರಾಂ ಪಂಚಾಯತ ಕಾರ್ಯದರ್ಶಿ ವಿಜಯಕುಮಾರ ಹಿರೇಮಠ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅಕ್ಟೋಬರ್ 2 ಅನ್ನು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಮಹಾತ್ಮಾ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಮೂಲಕ ಹಳ್ಳಿಗಳ ಬೆಳವಣಿಗೆಗೆ ವಿಶೇಷ ಆಸಕ್ತಿ ಹೊಂದಿದ್ದರು. ದೇಶವನ್ನು ಎಲ್ಲಾ ರೀತಿಯಲ್ಲಿ ಸ್ವಚ್ಛವಾಗಿಡಲು ಅತ್ಯಂತ ಕಳಕಳಿ ಹೊಂದಿದ್ದರು ಈ ಹಿನ್ನೆಲೆ ಅವರಿಗೆ ಗ್ರಾಮವನ್ನು ಸ್ವಚ್ಚವಾಗಿಸುವ ಮೂಲಕ ಗೌರವ ಸಲ್ಲಿಸುವ ಕೆಲಸ ಮಾಡೋಣ ಎಂದರು..

ಗ್ರಾಂ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ ಮಾತನಾಡಿ ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ನಿಮ್ಮ ಗ್ರಾಮಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಹಾಗೂ ಗಲೀಜಿನಿಂದ ಗ್ರಾಮದಲ್ಲಿ ವಿವಿಧ ರೀತಿಯ ಕಾಯಿಲೆಗಳು ಬರುತ್ತವೆ ಈ ಹಿನ್ನೆಲೆ ಸ್ವಚ್ಚತೆಗೆ ಒತ್ತು ನೀಡಿ ಕಾಯಿಲೆಯಿಂದ ದೂರವಾಗುವದರ ಜೊತೆಗೆ ಆರೋಗ್ಯವಂತ ಹಾಗೂ ಸೌಂದರ್ಯವುಳ್ಳ ಗ್ರಾಮವನ್ನು ನಿಮ್ಮದಾಗಿಸಬಹುದು ಹಾಗಾಗಿ ಗ್ರಾಮಸ್ಥರು ದಯವಿಟ್ಟು ಸ್ವಚ್ಚತೆಗೆ ಆದ್ಯತೆ ನೀಡಿ ನಮ್ಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಗ್ರಾಂ ಪಂಚಾಯತ ಸದಸ್ಯರಾದ ಬಸಮ್ಮ ಪುರದ ,ಬಸ್ಸಮ್ಮ ಕನ್ಯಾಳ  ಕಾತುನುಬಿ ಮುಲ್ಲಾನವರ ಸೋಮಣ್ಣ ಅಣ್ಣಿಗೇರಿ, ಮಲ್ಲಪ್ಪ ಅಸುಂಡಿ ರಮೇಶ್  ಹಂಡಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು ಸಂಜೀವಿನಿ ಒಕ್ಕೂಟದವರು, ಗ್ರಾಂ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *