Monday, September 16, 2024
Google search engine
Homeಗದಗಗದಗ : ಚುನಾಯಿತ ಪ್ರತಿನಿಧಿಗಳು ಶಿಕ್ಷಣವನ್ನು ಕಲಿತಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾದ್ಯ : ಚಂದ್ರಶೇಖರ...

ಗದಗ : ಚುನಾಯಿತ ಪ್ರತಿನಿಧಿಗಳು ಶಿಕ್ಷಣವನ್ನು ಕಲಿತಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾದ್ಯ : ಚಂದ್ರಶೇಖರ ಬಿ ಕಂದಕೂರ

ಚುನಾಯಿತ ಗ್ರಾಪಂ ಪ್ರತಿನಿಧಿಗಳಿಗೆ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರ..

ರೋಣ;- ಚುನಾಯಿತ ಗ್ರಾಮ ಪಂಚಾಯಿತಿ ಗಳ ಅನಕ್ಷರಸ್ಥ ಪ್ರತಿನಿಧಿಗಳನ್ನು ಓದು ,ಬರಹ ಮತ್ತು ಲೆಕ್ಕಾಚಾರಗಳಲ್ಲಿ ಕ್ರಿಯಾತ್ಮಕ ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರವು ಜಾರಿಗೆ ತಂದಿರುವ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಚುನಾಯಿತ ಪ್ರತಿನಿಧಿಗಳು ಪಡೆದುಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ನರೇಗಾ) ಚಂದ್ರಶೇಖರ ಬಿ ಕಂದಕೂರ ತಿಳಿಸಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ವತಿಯಿಂದ ಪಂಚಾಯಿತಿ ಚುನಾಯಿತ ಅನಕ್ಷರಸ್ಥ ಪ್ರತಿನಿಧಿಗಳಿಗೆ ಸಾಕ್ಷರತಾ ಕೌಶಲ್ಯಗಳನ್ನು ನೀಡುವ ಸಾಕ್ಷರ ಸನ್ಮಾನ ತರಬೇತಿದಾರರಿಗೆ ರೋಣ ತಾಲೂಕ ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿಂದು ಹಮ್ಮಿಕೊಂಡಿದ್ದ 3 ದಿನಗಳ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೋಧಕರು, ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು, ಚುನಾಯಿತ ಪ್ರತಿನಿಧಿಗಳು ಚನ್ನಾಗಿ ಶಿಕ್ಷಣವನ್ನು ಕಲಿತು ತಮ್ಮ ಗ್ರಾಮದ ಸಭೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರಿ ಅಂದಾಗ ಮಾತ್ರ ಈ ಯೋಜನೆ ಸ್ವಾರ್ಥಕತೆ ಆಗುತ್ತದೆ ಎಂದರು..

ಈ ಕಾರ್ಯಕ್ರಮ ದಲ್ಲಿ ತಾಲೂಕ ಪಂಚಾಯತಿ ವ್ಯವಸ್ಥಾಪಕರಾದ ದೇವರಾಜ ಸಜ್ಜನಶೆಟ್ಟರ ಮಾತನಾಡಿ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ. ಮೌಢ್ಯರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಅಕ್ಷರಸ್ಥರನ್ನಾಗಿಸುವಲ್ಲಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಅದಕ್ಕೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದರು. ಮಹಿಳೆಯರು ಸಾಕ್ಷರರಾದರೆ ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬಹುದು ಎಂದರು..

ಕಾರ್ಯಕ್ರಮದಲ್ಲಿ ವಿಷಯ ನಿರ್ವಾಹಕರಾದ ಎಚ್ ಕೆ ದೇಸಾಯಿ, ತಜ್ಞ ಸಂಪನ್ಮೂಲ ವ್ಯೆಕ್ತಿಗಳಾದ ಬಿ ಆರ್ ಪಟ್ಟಣಶೆಟ್ಟರ ಹಾಗೂ ಆರ್ ಬಿ ಸೋಮನಕಟ್ಟಿ, ಎ.ಎನ್.ಎಸ್.ಎಸ್.ಐ ಆರ್.ಡಿ ಸಂಸ್ಥೆಯ ತಾಲೂಕ ಸಂಯೋಜಕರಾದ ಶರಣಪ್ಪ ಕೊತಬಾಳ ಸ್ವಾಗತಿಸಿದರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ