25.3 C
New York
Friday, June 13, 2025

Buy now

spot_img

ಗದಗ : ಸಾಕಷ್ಟು ಮಹನೀಯರ ಕೊಡುಗೆ ಈ ಸ್ವಾತಂತ್ರ್ಯೊತ್ಸವ : ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಜಿಲ್ಲಾಡಳಿತದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗದಗ ಅಗಷ್ಟ15 : ದೇಶದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ, ನಿಕಟವಾಗಿ ನಿರ್ವಹಿಸುವುದೇ ದೇಶಕ್ಕೆ ನೀಡುವ ಕೊಡುಗೆಯಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಪ್ರಮುಖರಾದ ಮಹಾತ್ಮ ಗಾಂಧೀಜಿ, ಪಂಡಿತ ಜವಹರಲಾಲ್ ನೆಹರು, ಭಗತ್ ಸಿಂಗ್,ಸರ್ದಾರ್ ವಲ್ಲಭಾಯಿ ಪಟೇಲ್   ಸಾಕಷ್ಟು ಜನ  ತಮ್ಮ ಜೀವನವನ್ನು ಮುಡಿಪಾಗಿಟ್ಟು   ಹೋರಾಟದಲ್ಲಿ ಪಾಲ್ಗೊಂಡು ಸತ್ಯ, ಅಹಿಂಸೆಯನ್ನು ಅನುಸರಿಸಿ ಸ್ವಾತಂತ್ರ್ಯವನ್ನು ಪಡೆದುಕೊಂಡರು.

ವಿವಿಧ ರಾಜ ಸಂಸ್ಥಾನವಾಗಿ ಹರಿದು ಹಂಚಿದ ಭಾರತವನ್ನು ಒಂದಾಗಿಸುವುದು ದೊಡ್ಡ ಸವಾಲು ಅಗಿತ್ತು,ಅದನ್ನು ಎದುರಿಸಿ ಒಂದಾಗಿಸಿ ಸ್ವಾತಂತ್ರ್ಯ ಪಡೆದ ನಂತರ ಇಂದಿಗೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿ ನೆಲೆ ಉಳಿಸಿಕೊಂಡಿರುವುದು  ಭಾರತ ದೇಶದ ಸಾಧನೆಯೇ ಸರಿ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.

ಭಾರತ ದೇಶದ ಸಂವಿಧಾನವು ಈಡೀ ಜಗತ್ತಿಗೆ ಮಾದರಿಯಾದ ಸಂವಿಧಾನವಾಗಿದೆ,ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದ್ದು,ಪ್ರಸ್ತುತವಾಗಿ ನಮ್ಮ ಬೇಡಿಕೆಗಳು ಅಧಿಕಾವಾಗಿದ್ದು ಸಂಪನ್ಮೂಲಗಳು ಸೀಮಿತವಾಗಿವೆ, ದೇಶದಲ್ಲಿರುವ ಸಮಸ್ಯೆಗಳನ್ನು ನಾವೆಲ್ಲರೂ ಸೇರಿ ಶ್ರಮಪಟ್ಟು  ಎದುರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಒ ಅಧಿಕಾರಿ ಭರತ್ ಎಸ್,ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ,ಜಿಲ್ಲಾಪಂಚಾಯತ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಧಿಕಾರಿ ಗಂಗಪ್ಪ ಎಂ.ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಜಿ.ಪಂ. ಸಿಇಓ ಭರತ್ ಎಸ್ ಅವರಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಗದಗ : ನೀರಲಗಿ ಉಪ ಕೇಂದ್ರದಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಗದಗ : ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ತ್ರಿಚಕ್ರ ವಾಹನ ವಿತರಣೆ ಗದಗ: ಬೇಸಾಯ ಕಾರ್ಯಕ್ರಮದಡಿ ಘಟಕಗಳ ನಿರ್ಮಾಣಕ್ಕೆ ಸಹಾಯಧನದಕ್ಕೆ ಅರ್ಜಿ ಆಹ್ವಾನ ಗದಗ : ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಟೇಲರ್ ಪಲ್ಟಿ ! ತಪ್ಪಿದ ಅನಾಹುತ !  ಗದಗ : ಶಿರಹಟ್ಟಿ ತಾಲೂಕಿನ ವಿವಿಧ ಕಾಮಗಾರಿಗೆ ಸಿ ಇ ಓ ಭೇಟಿ, ಪರಿಶೀಲನೆ ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ಗದಗ : ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಲೋಕಾಯುಕ್ತ ಬಲೆಗೆ ..! ಹುಬ್ಬಳ್ಳಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ - ಮೂವರು ಸ್ಥಳದಲ್ಲೇ ಸಾವು ! ಗದಗ : ಶಾಲಾ ಬಸ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ !