Monday, September 16, 2024
Google search engine
Homeಆರೋಗ್ಯಗದಗ : ಅಂತಾರಾಷ್ಟ್ರೀಯ ಯುವದಿನ ಹಾಗೂ ಹೆಚ್.ಐ.ವಿ. ಏಡ್ಸ್ ಅರಿವು ಮಾಸಾಚರಣೆ

ಗದಗ : ಅಂತಾರಾಷ್ಟ್ರೀಯ ಯುವದಿನ ಹಾಗೂ ಹೆಚ್.ಐ.ವಿ. ಏಡ್ಸ್ ಅರಿವು ಮಾಸಾಚರಣೆ

ಗದಗ ಅಗಷ್ಟ13: ಯುವಜನಾಂಗ ಮಾನಸಿಕ,ಸಾಮಾಜಿಕ, ದೈಹಿಕವಾಗಿ ಆರೋಗ್ಯವಂತರಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವೈಕ್ತಿಗಳಾಗಿ ಬೆಳೆಯಬೇಕು ಎಂದು ಡಾ.ಅರುಂಧತಿ ಕೆ ಅವರು ಹೇಳಿದರು.

ನಗರದ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಾಹಾವಿದಾಲಯದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಜಿಲ್ಲೆಯ ರೆಡ್ ರಿಬ್ಬನ್ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳು ಹಾಗೂ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಾಹಾವಿದಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತರಾಷ್ಟಿçÃಯ ಯುವ ದಿನ ಹಾಗೂ ತೀವ್ರತರ ಹೆಚ್.ಐ.ವಿ. ಅರಿವಿನ ಮಾಸಾಚರಣೆ ಉದ್ಘಾಟಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಹೆಚ್.ಐ.ವಿ. ಏಡ್ಸ್ ಅರಿವಿನ ಮಾಸಾಚರಣೆಯಲ್ಲಿ ರೋಗದ ಬಗ್ಗೆ ಮಾಹಿತಿ ತಿಳಿಯಬೇಕು  “ಸುಸ್ಥಿರ ಡಿಜಿಟಲ್ ಅಭಿವೃಧ್ದಿಗಾಗಿ ಯುವ ಜನತೆಯ ಮಂದಾಳತ್ವ” ಎಂಬ ಈ ವರ್ಷದ ಘೋಷಣೆಯಂತೆ ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕು. ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗಿದ್ದು, ಗುರು ಹಿರಿಯರು, ತಂದೆ ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು,ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾನವನ್ನು ಕೈಗೊಂಡು ಸದೃಡವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು.

ರಕ್ತದಾನ ಮಾಡಲು ಯುವ ಸಮುದಾಯ ಮುಂದಾಗಬೇಕು, ರಕ್ತದಾನ ಮಾಡಲು ಹೆಚ್.ಬಿ. ಪ್ರಮಾಣ 12.5 ಗ್ರಾಂ, 45 ಕೆ.ಜಿ. ತೂಕಗಿಂತ ಹೆಚ್ಚಿಗೆ ಇರಬೇಕು, 18 ರಿಂದ 60 ವಯೋಮಾನದ ಪುರುಷ ಮಹಿಳೆ ಎಂಬ ಬೇಧ ವಿಲ್ಲದೆ ಯಾರು ಬೇಕಾದರೂ ರಕ್ತದಾನ ಮಾಡಬಹುದು ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಸದೃಢ ಆರೋಗ್ಯ ಮತ್ತು ಸನ್ನಡತೆಗೆ ಪ್ರಮಾಣ ವಚನವನ್ನು ಡಾ.ಅರುಂಧತಿ ಕೆ ಬೋಧಿಸಿದರು.

ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸಿ ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವÀನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ಥುತ ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿರುವುದೆಂದು ತಿಳಿಸಿದರು, ಜಾತಿ, ಧರ್ಮ, ಲಿಂಗ ಗುಂಪು ಆಧಾರಿತ ಸವಾಲುಗಳನ್ನು ಎದುರಿಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕು, ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದು ಅವರ ಪ್ರೇರಣೆಯಂತೆ ಶ್ರಧ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ವಿಜಯಲಕ್ಷ್ಮಿ ಒಲಿಯುತ್ತಾಳೆಂದು ತಿಳಿಸಿದರು. ರೋಗಿಯ ಜೀವ ಉಳಿಸಲು ರಕ್ತದಾನ ಮಾಡಿದರೆ ಸಾಕು ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಯುವದಿನಾಚರಣೆ ನಿಮಿತ್ಯ ಹೆಚ್.ಐ.ವಿ ಏಡ್ಸ್ ಮತ್ತು ರಕ್ತದಾನದ ಕುರಿತು ಇ-ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಪ್ರತಿಭಾ ರಾಬಜ್ಜನವರ ಹಾಗೂ ಮಂಜುಳಾ ಪರಾಪೂರ ಪ್ರಥಮ, ಕುಮಾರಿ ಆಫ್ರೀನ್ ಹೊಸಳ್ಳಿ, ಮೀನಾಕ್ಷಿ ಹೊಸಕೇರಿ ಹಾಗೂ ಸಂಕಲ್ಪಿತಾ ಕೋಲ್ಕರ ದ್ವಿತೀಯ, ಕುಮಾರ ಪ್ರಮೋದ ಕಪ್ಲಿ ಹಾಗೂ ಕ್ಯಾದಗಿಹಳ್ಳಿ ಕೋಟೆಪ್ಪ ತೃತೀಯ ಸ್ಥಾನಗಳಿಸಿದ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಪ್ರಾಚಾರ್ಯರಾದ ಎಸ್. ಪಿ. ಗೌಳಿ ಮಾತನಾಡಿ ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯೌವನವನ್ನು ಜೋಪಾನ ಮಾಡಿಕೊಳ್ಳಬೇಕು ಹಾಗೂ ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾಜಿಕಸೇವೆಗೆ ಮುಂದಾಗಬೇಕೆAದು ಹೇಳಿದರು. ವಿದ್ಯಾರ್ಥಿಗಳಾದ ಪ್ರತಿಭಾ ರಾಬಜ್ಜನವರ ಹಾಗೂ ಕ್ಯಾದಿಗಿಹಳ್ಳಿ ಕೋಟೆಪ್ಪರವರು ಇ-ಕ್ವಿಜ್‌ನಲ್ಲಿ ಭಾಗವಹಿಸಿದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಎನ್.ಎಸ್.ಎಸ್. ಅಧಿಕಾರಿ ಪ್ರೋ. ಎಮ್.ಎಮ್. ನದಾಫ್, ರೆಡ್ ಕ್ರಾಸ್ ಮುಖ್ಯಸ್ಥೆ ಶ್ರೀಮತಿ ಕೆ.ಬಿ. ಸಂಕನಗೌಡರ ಹಾಗೂ ಕಾಲೇಜ ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಜರಿದ್ದರು. ಕುಮಾರಿ ಕಾವೇರಿ ಬಡಿಗೇರ ಪ್ರಾರ್ಥಿಸಿದರು. ಕುಮಾರಿ ಪವಿತ್ರಾ ಹುಬ್ಬಳ್ಳಿ ಸ್ವಾಗತಿಸಿದರು,ಕುಮಾರಿ ಪೂಜಾ ಶೀಲವಂತರ ಕಾರ್ಯಕ್ರಮವನ್ನು ನಿರೂಪಿಸಿದರು, ಕುಮಾರ ಭೀಮಪ್ಪ ಅಣ್ಣಿಗೇರಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ