ಗದಗ ಅಗಷ್ಟ5 : ಗದಗ ಜಿಲ್ಲೆಯಲ್ಲಿ ರೋಣ ತಾಲೂಕ ಪ್ರಗತಿ ಹಂತದಲ್ಲಿ ಹಿಂದೆ ಉಳಿದಿದೆ ನಿಮ್ಮೆಲ್ಲರ ಸಹಕಾರದಿಂದ ತಾಲೂಕನ್ನು ಮುಂದೆ ಸಾಗಿಸೋಣ ಎಂದು ನೂತನ ನರೇಗಾ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಚಂದ್ರಶೇಖರ ಬಿ ಕಂದಕೂರ ಅವರು ಅಭಿಪ್ರಾಯ ಪಟ್ಟರು.
ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಕೊಪ್ಪಳ ಜಿಲ್ಲೆಯ ಕನಕಗಿರಿ ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸದ್ಯ ರೋಣ ತಾಲೂಕಿಗೆ ವರ್ಗಾವಣೆ ಆಗಿರುತ್ತದೆ ಇಲ್ಲಿಯ ವಾತಾವರಣ ನಮ್ಮ ವಾತಾವರಣಕ್ಕೆ ಬಹಳಷ್ಟು ವ್ಯತ್ಯಾಸ ಇರುತ್ತದೆ. ಆದರೆ ಕಲಸದ ವಿಚಾರ ಮಾತ್ರ ಎಲ್ಲೆಡೆ ಒಂದೆ ಇರುತ್ತದೆ ಎಲ್ಲರೂ ಒಗ್ಗೂಡಿ ಕೆಲಸ ಮಾಡುವದರಿಂದ ತಾಲೂಕಿನ ಪ್ರಗತಿಗೆ ಮುನ್ನಡೆ ಆಗುತ್ತದೆ. ಈ ಹಿನ್ನೆಲೆ ತಾಲೂಕಿನ ಪ್ರಗತಿ ಉತ್ತಮ ಪಡಿಸಲು ಸಿಬ್ಬಂದಿಗಳ ಸಹಾಯ, ಸಹಕಾರ ಅಗತ್ಯ ಎಂದು ಹೇಳಿದರು..
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಮಾತನಾಡಿ ತಾಲೂಕಿನ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ಸಂಘಟಿತ ಪ್ರಯತ್ನ ಅತ್ಯಗತ್ಯ ಎಲ್ಲಾ ಸಿಬ್ಬಂದಿಗಳು ಸಹ ನೂತನವಾಗಿ ಆಗಮಿಸಿದ ಸಹಾಯಕ ನಿರ್ದೇಶಕರಿಗೆ ಸಹಕಾರ ನೀಡುವುದರ ಜೊತೆಗೆ ತಾಲೂಕಿನ ಪ್ರಗತಿಗೆ ಮುನ್ನುಡಿ ಬರೆಯಿರಿ ಎಂದರು.
ತಾಲೂಕ ಯೋಜನಾಧಿಕಾರಿ ಸಿ.ಎಸ್.ನಿಲಗುಂದ ಸನ್ಮಾನ ಮಾಡಿ ಬರಮಾಡಿಕೊಂಡರು, ತಾಲೂಕ ಪಂಚಾಯತ ವ್ಯವಸ್ಥಾಪಕರಾದ ದೇವರಾಜ ಸಜ್ಜನಶೆಟ್ಟರ ಪರಿಚಯಿಸಿದರು. ಅರುಣ ಸಿಂಗ್ರಿ ನಿರೂಪಿಸಿ ವಂದಿಸಿದರು. ತಾಲೂಕ ಪಂಚಾಯತ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.