Sunday, September 8, 2024
Google search engine
Homeಉದ್ಯೋಗಗದಗ : ಅಪ್ರೆಂಟಿಶಿಪ್  ತರಬೇತಿಗಾಗಿ ನೇರ ಸಂದರ್ಶನದಲ್ಲಿ 112 ಆಭ್ಯರ್ಥಿಗಳು ಆಯ್ಕೆ

ಗದಗ : ಅಪ್ರೆಂಟಿಶಿಪ್  ತರಬೇತಿಗಾಗಿ ನೇರ ಸಂದರ್ಶನದಲ್ಲಿ 112 ಆಭ್ಯರ್ಥಿಗಳು ಆಯ್ಕೆ

ಗದಗ  ಜುಲೈ 18 : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಗದಗ ಬೇಟಗೇರಿಯಲ್ಲಿ ಗುರುವಾರ ಬೆಂಗಳೂರ ಎಚ್.ಎ.ಎಲ್ ಅವರಿಂದ ಅಪ್ರೆಂಟಿಶಿಪ್ (ಶಿಶಿಕ್ಷು) ತರಬೇತಿಗಾಗಿ ನೇರ ಸಂದರ್ಶನ ಏರ್ಪಡಿಸಲಾಗಿತ್ತು.

ಸಂದರ್ಶನಕ್ಕಾಗಿ ಆಗಮಿಸಿದ ಅವಿನಾಶ ಹಾಗೂ ಗಿರೀಶ ಎಚ್.ಎ.ಎಲ್ ಬೆಂಗಳೂರು ಇವರು ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿಯೊಂದಿಗೆ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಲು ತಿಳಿಸುತ್ತಾ ಅಪ್ರೆಂಟಿಶಿಪ್ ನೇರ ಸಂದರ್ಶನಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಬೆಳಗಾವಿ ವಿಭಾಗದ ಸಹಾಯಕ ಅಪ್ರೆಂಟಿಶಿಪ್ ಸಲಹೆಗಾರರಾದ ಹಾಗೂ ಸಂಸ್ಥೆಯ ನೋಡಲ್ ಅಧಿಕಾರಿ/ಪ್ರಾಚಾರ್ಯರಾದ ಡಾ.ಮಲ್ಲೂರ ಬಸವರಾಜ, ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಪ್ರೆಂಟಿಶಿಪ್ ಬಗ್ಗೆ ವಿವರವಾಗಿ ತಿಳಿಸುತ್ತಾ ಸದರಿ ನೇರ ಸಂದರ್ಶನಕ್ಕೆ ಭಾಗವಹಿಸಿದ ತರಬೇತಿದಾರರು ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸಲಹೆಯನ್ನು ನೀಡಿದರು.

ತಾಲೂಕಾ ನೋಡಲ್ ಅಧಿಕಾರಿ ಎಲ್. ವಾಯ್. ತಳವಾರ, ಪ್ಲೇಸಮೆಂಟ ಅಧಿಕಾರಿಯಾದ ಬಡೆಸಾಬ್ ತೋಟದ ಸಿಬ್ಬಂದಿಯವರಾದ ಶ್ರೀಮತಿ ಭಾರತಿ ಸುಂಕದ, ಶ್ರೀಮತಿ ವಾಣಿಶ್ರೀ ಕುಲಕರ್ಣಿ, ಶ್ರೀಮತಿ ಸುನಿತಾ ಸಾಕೇನವರ, ಗಂಗಾಧರ ತಳವಾರ, ಮಹಮ್ಮದ ಅಲಿ ನಧಾಪ್, ಮತ್ತು ಜಿಲ್ಲೆಯ ಸರಕಾರಿ/ಅನುದಾನಿತ/ಖಾಸಗಿ ಐ.ಟಿ.ಐ. ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ನಾರಾಯಣ ಚಿತ್ರಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನೇರ ಸಂದರ್ಶನದಲ್ಲಿ ಜಿಲ್ಲೆಯ ಒಟ್ಟು 189 ಅಭ್ಯರ್ಥಿಗಳಲ್ಲಿ 112 ಅಭ್ಯರ್ಥಿಗಳು ಅಪ್ರೆಂಟಿಶಿಪ್ (ಶಿಶಿಕ್ಷು) ತರಬೇತಿಗಾಗಿ ಆಯ್ಕೆಯಾಗಿದ್ದಾರೆ. 80 ವಿಧ್ಯಾರ್ಥಿಗಳು ಎರಡನೇ ವರ್ಷದ ಪರೀಕ್ಷಾ ನಂತರದ ಎರಡನೇ ಸುತ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ನೋಡಲ್ ಅಧಿಕಾರಿ ಪ್ರಾಚಾರ್ಯ ಡಾ.ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಅಂತಾರಾಷ್ಟ್ರೀಯ ಕುಸ್ತಿ : ಲಕ್ಕುಂಡಿಯ ಗ್ರಾಂ, ಪಂಚಾಯತ ಸದಸ್ಯ ರಮೇಶ ಚಾಂಪಿಯನ್ ಗದಗ : ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟನೆ ಲಕ್ಕುಂಡಿ : ಪೈಲ್ವಾನರ ಪಟ್ಟು, ಬಯಲು ಜಂಗೀ ಕುಸ್ತಿ ಖದರ್  ಗದಗ : ಭೂಮರಡ್ಡಿ ವೃತ್ತದಲ್ಲಿ ಅಪಘಾತ : ಪೋಲೀಸ್ ಪೇದೆ ಸ್ಥಳದಲ್ಲೇ ಸಾವು !  ಗದಗ : ಅನಾಮಧೇಯ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಮನವಿ ಗದಗ : ಸುಭದ್ರ ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು :ಎಸ್ ವಿ ಸಂಕನೂರು ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಸ್ವಯಂ ಉದ್ಯೋಗ ಹೊಂದಲು ಜಿಮ್ ಸ್ಥಾಪನೆಗಾಗಿ ಸಹಾಯಧನಕ್ಕೆ ಅರ್ಜಿ ಆಹ್ವಾನ ಗದಗ : ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಗದಗ : ಲೋಕಾಯುಕ್ತ ಜನ ಸಂಪರ್ಕ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ