ಗದಗ ೦೯: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರ ವಾರ್ಡ ನಂ. ೩೫ ರ ಬಾಲಾಜಿ ನಗರದಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಹಾಗೂ ವಾರ್ಡ ನಂ. ೩೩ರ ರಿಲಾಯನ್ಸ್ ಸ್ಮಾರ್ಟ ಬಜಾರದ ಪಕ್ಕದಲ್ಲಿ ಕಸದ ರಾಶಿಯೇ ಬಿದ್ದಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೆ ಹಾಗೂ ವಾರ್ಡ ನಂ. ೨೫ರ ಮಧ್ಯಭಾಗದಲ್ಲಿರುವ ಟಾಂಗಾ ಕೂಟದ ಹತ್ತಿರ ಚರಂಡಿಯ ನೀರು ನಿಂತು ಸಾರ್ವಜನಿಕರ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಹಾಗೂ ವಾರ್ಡ ನಂ. ೨೬ ರಲ್ಲಿ ಗ್ರೇನ್ ಮಾರ್ಕೆಟ್‌ಗೆ ಹೋಗುವ ರಸ್ತೆಯಲ್ಲಿ ಕಸದ ರಾಶಿ ರಾಶಿ ಗುಡ್ಡಗಳು ಬಿದ್ದಿರುವುದು ಅಧಿಕಾರಿಗಳ ಕಣ್ಣಿಗೆ ಕಾಣುವುದಿಲ್ಲವೆ?
ಎಂದು ಶಾಂತಯ್ಯ ವೀ. ಮುತ್ತಿನಪೆಂಡಿಮಠ ಸಾಮಾಜಿಕ ಕಾರ್ಯಕರ್ತರು ಗದಗ-ಬೆಟಗೇರಿ ನಗರಸಭೆ ಆಡಳಿತ ವೈಖರಿಗೆ ಆಕ್ರೋಶ ವ್ಯಕ್ತಪಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಸ್ಥಿತಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.