Tuesday, May 21, 2024
Google search engine
Homeಶಿಕ್ಷಣಉದ್ಯೋಗಗದಗ : ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ !

ಗದಗ : ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ !

ಗದಗ : ಗದಗ ಜಿಲ್ಲೆಯ  ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ

ಪ್ರೀತಿಸಿದ ಯುವತಿಯೊಂದಿಗೆ ವಿವಾಹವಾಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಅಪ್ಪಣ್ಣ ಕನಕಪ್ಪ ಗೊರಕಿ (28) ಹಾಗೂ ಲಲಿತಾ ರಾಜೇಂದ್ರ ಹಲಗೇರಿ (24) ಮೃತ ಪ್ರೇಮಿಗಳು ಎಂದು ಗುರುತಿಸಲಾಗಿದೆ.

ನರೇಗಲ್ಲ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಘಟನೆ ಜರುಗಿದೆ.

ಇದೇ ಏಪ್ರೀಲ್ 4 ರಂದು ಬೇರೊಬ್ಬ ಯುವಕನೊಂದಿಗೆ ಲಲಿತಾ ಮದುವೆ ಆಗಿದ್ದಳು. ತಾನು ಪ್ರೀತಿಸಿದ್ದ ಪ್ರೇಮಿಯೊಂದಿಗೆ ವಿವಾಹವಾಗದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೀತಿಸಿದ ಯುವಕ ಹಾಗೂ ಯುವತಿ‌ ಇಬ್ಬರೂ ನೇಣಿಗೆ ಶರಣಾಗಿದ್ದಾರೆ.ಎನ್ನಲಾಗಿದೆ.!

ಸ್ಥಳಕ್ಕೆ ನರೇಗಲ್ಲ ಪೊಲೀಸರು‌ ಬೇಟಿ ನೀಡಿ ,ಪರಿಶೀಲನೆ ನಡೆಸಿದ್ದಾರೆ. ನರೇಗಲ್ಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments