Monday, April 15, 2024
Google search engine
Homeಆರೋಗ್ಯವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ 

ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ 

 

ಅಡವಿಸೋಮಾಪೂರ: ಇಂದು ದಿನಾಂಕ 29/11/2023 ರಂದು ಗ್ರಾಮ ಪಂಚಾಯತ ಅಡವಿಸೋಮಪೂರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಅಡವಿಸೋಮಾಪೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸಭಾ ಭವನದಲ್ಲಿ ವಿಕಲಚೇತನರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

VRW ಶಿವಪ್ಪ ದೇವಪ್ಪ ತಳವಾರ ನಿರೂಪಣೆಯೊಂದಿಗೆ ಸ್ವಾಗತಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಕೀರ್ತಿ ಪ್ರ. ಪಾಟೀಲ ಅವರು ವಿಕಲಚೇತನರನ್ನು ಸಮಾಜದಲ್ಲಿ ಗೌರಯುತವಾಗಿ ಕಾಣುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು .

ಹಾಗೂ ಅವರನ್ನು ಸಹ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಹೇಳಿದರು. ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ಯಾಮಸುಂದರ ಡಂಬಳ ಅವರು ಮಾತನಾಡಿ ‘ಆರೋಗ್ಯವೇ ಭಾಗ್ಯ’ ವಿಕಲಚೇತನರು ದೈಹಿಕವಾಗಿ ಮಾನಸಿಕವಾಗಿ ಉತ್ತಮ ಸದೃಢತೆ ಹೊಂದುವುದು ಅತ್ಯಂತ ಅವಶ್ಯಕ ಎಂದರು. ಅದೇ ರೀತಿ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಪ್ರೇಮಾ ಹುಟ್ಟಿ ಅವರು ವಿಕಲಚೇತನರನ್ನ ಉದ್ದೇಶಿಸಿ ಮಾತನಾಡಿ ವಿಕಲತೆಯು ಶಾಪವಲ್ಲ ಅದೊಂದು ವರ ವಿಕಲಚೇನರ ಸಮಗ್ರ ಏಳ್ಗೆಗೆ ಎಲ್ಲಾರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.

ಡಾ// ಲೂಧಿಯಾ.ಕೆ. ಅವರು ವಿಕಲಚೇತನರ ಆರೋಗ್ಯ ತಪಾಸಣೆ ಮಾಡಿದರು. ಆರೋಗ್ಯ ಸಂಯೋಜಕರಾದ ವಿದ್ಯಾ ಕಿತ್ತೂರ,V.C. ಹಿರೇಮಠ ಕಾರ್ಯದರ್ಶಿಗಳು ಹಾಗೂ ಖಾಜಾಹುಸೇನ ಕಾತರಕಿ MRW ಗದಗ, ಹಾಗೂ ಗ್ರಾಮ ಪಂಚಾಯಿತ ಸದಸ್ಯರಾದ , ಮಲ್ಲಪ್ಪ ಅಸುಂಡಿ ,ಮಹೇಶ್ ಅಂಗಡಿ , ಪರಸಪ್ಪ ಲಮಾಣಿ , ಉಪಸ್ಥಿತರಿದ್ದರು. ಶಿವಪ್ಪ ದೇವಪ್ಪ ತಳವಾರ ಸಕಲ ಗಣ್ಯಮಾನ್ಯರಿಗೆ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments