Saturday, May 4, 2024
Google search engine
Homeನಮ್ಮ ಜಿಲ್ಲೆಅಡವಿಸೋಮಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನ

ಅಡವಿಸೋಮಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನ

ಗದಗ : ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಮತ್ತು ಅಕ್ಷರ ಫೌಂಡೇಶನ್‌ಗಳ ಸಂಯುಕ್ತ ಆಶ್ರಯದಲ್ಲಿ ಗಣಿತ ಕಲಿಕಾ ಆಂದೋಲನ ಪರಿಕ್ಷೆಯು ಅಡವಿಸೋಮಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು.

ಅಡವಿಸೋಮಾಪೂರ ಗ್ರಾಪಂ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೀರ್ತಿ ಪಾಟೀಲ್ ಹಾಗೂ ಗ್ರಾಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೇಮಾ ಹಟ್ಟಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಸೊಮ್ಮಣ್ಣ ಅಣ್ಣೇಗೇರಿ , ಕಾತುನುಬಿ ಮುಲ್ಲಾನವರ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಪೂರ್ಣಿಮ ಹೊಂಬಳ ಹಾಗೂ ಸಧ್ಯಸರು , ಸ್ವಯಂ ಸೇವಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋ ಪಾಧ್ಯಾಯಿನಿ ಎಸ್ ಆರ್ ಮಟ್ಟಿ ಕಾರ್ಯಕ್ರಮ ಉದ್ದೇಶಸಿ ಮಾತನಾಡಿದರು . ಕಲ್ಲೋಳಿ ಶಿಕ್ಷಕರು  ಗಣೆತ ಕಲಿಕಾ ಆಂದೋಲನ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.  ಈ ಕಾರ್ಯಕ್ರಮವನ್ನು ಎಮ್ ಎಚ್ ದೊಡ್ಡಮನಿ ಶಿಕ್ಷಕರು ನಡೆಸಿದರು.

ಈ ಸಂದರ್ಭದಲ್ಲಿ ಅಡವಿಸೋಮಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಯ ಶಿಕ್ಷಕರು ಹಾಗೂ ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು .ಬಳಿಕ ೪,೫ ಮತ್ತು ೬ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯ ಪ್ರಶ್ನೆ ಪತ್ರಿಕೆ ವಿತರಿಸಿ ಪರಿಕ್ಷೆ ನಡೆಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments