ಗದಗ : ಗದಗ ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಾಜಿ ಕುಸ್ತಿ ಪಟ್ಟು ಶರಣಪ್ಪ ಬೆಲೇರಿ ಇಂದು ಇಹಲೋಕ ತ್ಯಜಿಸಿದ್ದಾರೆ.
ಗದಗಿನ ಕ್ರೀಡಾ ಲೋಕದ ನಕ್ಷತ್ರ ಒಂದು ಕಳುಚಿತು ಶ್ರೀ ಶಂಕ್ರಪ್ಪ ಬೇಲೇರಿ ಗುರುಗಳ ಅಕಾಲಿಕ ಮರಣದಿಂದ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಗದಗಿನ ಕ್ರೀಡಾ ದೃವತಾರೆಯಾದ ಕೊಂಡಿ ಎಂದು ಕಳಚಿ ಗದಗಿನ ಕ್ರೀಡಾಲೋಕಕ್ಕೆ ದೊಡ್ಡ ಅಗಾತ ನೀಡಿದೆ ವಿದ್ಯಾರ್ಥಿಗಳಿಗಿದ್ದ ಕ್ರೀಡಾ ಮನೋಭಾವನೆಯನ್ನು ಗುರುತಿಸಿ ರಾಜ್ಯ ಅಂತರಾಷ್ಟ್ರೀಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ತಯಾರ ಮಾಡಿದ ಗದಗಿನ ಹೆಮ್ಮೆಯ ಕುಸ್ತಿ ತರಬೇತಿದಾರರಾಗಿದ್ದಂತ ಗುರುಗಳಾದ ಅಕಾಲಿಕ ಮರಣದಿಂದ ಸಾವಿರಾರು ಕ್ರೀಡಾ ವಿದ್ಯಾರ್ಥಿಗಳ ಸ್ಪೂರ್ತಿಯ ಚಿಲುಮೆ ಇನ್ನೂ ಬಾರದ ಲೋಕಕ್ಕೆ ಪಯಣ ಬೆಳೆಸಿದೆ.
ಗದಗ ಜಿಲ್ಲೆಯ ಕುಸ್ತಿ ತರಬೇತುದಾರರಾಗಿ ಹಲವಾರು ವರ್ಷಗಳಿಂದ ಗದಗ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಅವರ ಪರಿಶ್ರಮ ಬಹಳ ಇಂತಹ ವ್ಯಕ್ತಿ ಇಂದು ಹ್ರದಯಘಾತದಿಂದ ಸಾವನ್ನಪ್ಪಿದ್ದು ಗದಗ ಜಿಲ್ಲೆಗೆ ತುಂಬಾಲಾರದ ನಷ್ಟ
ಕುಸ್ತಿ ಆಟಗಾರರಿಗೆ ಸ್ಫೂರ್ತಿ ತುಂಬುವ ಕೆಲಸ ಶರಣಪ್ಪ ಬೆಲೇರಿ ಮಾಡಿದ್ದರು. ತರಬೇತಿಯನ್ನು ಗದಗದಿಂದ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ತರಬೇತಿ ಪಡೆಯಲು ಹಲವರು ಮುಂದೆ ಬರುತ್ತಿದ್ದಾರೆ ಎಂದು ಬೇಲೇರಿ ಹೇಳಿದ್ದರು.
ತರಬೇತುದಾರ ಶರಣಪ್ಪ ಬೇಲೇರಿ ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು ಮತ್ತು ಮುಂದಿನ ಸ್ಪರ್ಧೆಯನ್ನು ಎದುರಿಸಲು ಸಿದ್ಧರಾದರು. ಪದಕದ ಭರಾಟೆ ಪ್ರಾರಂಭವಾಗುವ ಮೊದಲು, ಬೆಲೇರಿ ಪ್ರತಿಭೆಗಳನ್ನು ಗುರುತಿಸುತ್ತಾರೆ ಮತ್ತು ತಮ್ಮ ಮಕ್ಕಳನ್ನು ತರಬೇತಿಗೆ ಕಳುಹಿಸಲು ಪೋಷಕರ ಮನವೊಲಿಸಲು ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅವರ ವಾದಕ್ಕೆ ಅನೇಕ ಗ್ರಾಮಸ್ಥರು ಮರುಪ್ರಶ್ನೆ ಹಾಕಿದರಾದರೂ, ಹುಡುಗಿಯರು ಮನೆಯೊಳಗೆ ಇರಬೇಕು, ಅಂತಹ ತರಬೇತಿ ಅವರಿಗೆ ಅಪಾಯಕಾರಿ ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಆದರೆ ಬೆಲೇರಿ ಇದಾವುದಕ್ಕೂ ಹಿಂಜರಿಯದೇ ಅಚಲರಾಗಿದ್ದರು, ಮತ್ತು ಅಂತಿಮವಾಗಿ, ಕೆಲವು ವರ್ಷಗಳ ಹಿಂದೆ ಎಂಟು ಹುಡುಗಿಯರನ್ನು ತನ್ನ ಶಿಬಿರಕ್ಕೆ ಸೇರುವಂತೆ ಮನವರಿಕೆ ಮಾಡಿದರು. ಹಣಕಾಸಿನ ಅಡಚಣೆಗಳ ನಡುವೆಯೂ, ಬೇಲೇರಿ ಅವರಿಗೆ ತರಬೇತಿ ನೀಡುವುದನ್ನು ಮುಂದುವರೆಸಿದರು. ಬಳಿಕ ಇದೇ ತಂಡದ ಹುಚ್ಚಣ್ಣವರ್ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅಗ್ರಸ್ಥಾನ ಪಡೆದಾಗ, ನಿವಾಸಿಗಳು ಅವರ ತರಬೇತಿಯನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಿದರು. ಎನ್ನಬಹುದು