ಗದಗ : ಪ್ರೇಮ ವೈಫಲ್ಯಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಣಗಿನಹಾಳದಲ್ಲಿ ನಡೆದಿದೆ .
ಮೃತ ಯುವತಿಯನ್ನು ಪಾರ್ವತಿ (24) ಎಂದು ಗುರುತಿಸಲಾಗಿದೆ. ಈಕೆ ಅನ್ಯಕೋಮಿನ ಯುವಕನನ್ನು ಲವ್ ಮಾಡುತ್ತಿದ್ದಳು.ಎನ್ನಲಾಗಿದೆ.
ನಂತರ ಇಬ್ಬರು ಪ್ರೇಮಿಗಳು ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದರಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಸಾಯುವ ಮುನ್ನ ಪಾರ್ವತಿ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್ ಬಹಿರಂಗವಾಗಿಲ್ಲ, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.