ಗದಗ : ಅಧಿಕಾರಿಗಳ ಬೇಜವಾಬ್ದಾರಿತನ ! ಜೀವಜಲ ಪೋಲು !

ಗದಗ : ಕಳೆದ ಹಲವು ದಿನಗಳಿಂದ ಅವಳಿ ನಗರಕ್ಕೆ ಪೂರೈಕೆಯಾಗುವ ತುಂಗಭದ್ರ ನದಿ ಕುಡಿಯುವ ‘ಜೀವ ಜಲ’ ವ್ಯರ್ಥವಾಗಿ ಪೋಲಾಗುತ್ತಿದ್ದರೂ ಗದಗ-ಬೆಟಗೇರಿ ನಗರಸಭೆ ಆಡಳಿತ ಕಣ್ಣುಮಚ್ಚಿ ಕುಳಿತಿದೆ.

ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಿತ್ಯ ಕೊರ್ಲಹಳ್ಳಿಯಿಂದ ತುಂಗಭದ್ರ ನೀರು ಗದಗ ನಗರಕ್ಕೆ ಹರಿದು ಬರುವುದರೊಳಗೆ ಮಾರ್ಗದ ಎಡ ಬಲ ಹೊಲಗಳಿಗೆ ಸೋರಿಕೆಯಾಗುತ್ತಿದೆ. ಹರಿದು ಬರುವ ನೀರಿನಲ್ಲಿಅಂದಾಜು ಶೇ. 25 ರಿಂದ 50 ಪೋಲಾಗಿ ಹೊಲಗಳಿಗೆ ಹರಿದು ಹೋಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಒಡೆದ ಪೈಪ್‌ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕರಿಂದ ಉಗ್ರ ಹೋರಾಟ:

ಗದಗ-ಬೆಟಗೇರಿ ಅವಳಿ ನಗರದ ಜನತೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ. ಪೈಪ್‌ ಒಡೆದ, ದುರಸ್ತಿ ನೆಪ ಹೇಳಿಕೆ ನೀಡುವ ನಗರಸಭೆ 2 ತಿಂಗಳಾದರೂ ಪೋಲಾಗುತ್ತಿರುವ ನೀರನ್ನು ತಡೆಯುವಲ್ಲಿವಿಫಲವಾಗಿದೆ. ನೀರಿನ ಕರ ತುಂಬಿದರೂ ಸಾರ್ವಜನಿಕರಿಗೆ ನೀರು ಪೂರೈಸಲು ನಗರಸಭೆಯ ಆಡಳಿತ ವಿಫಲವಾಗಿದೆ.ಜಿಲ್ಲಾಧಿಕಾರಿಗಳು ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿಸಾರ್ವಜನಿಕರು, ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಹಲವು ದಿನಗಳಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿಗೆ ಹರಿದು ಹೋಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ನಗರಸಭೆ ಸಿಬ್ಬಂದಿ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ನಗರಸಭೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಜನರು ಎಚ್ಚರಿಕೆ ನೀಡಿದ್ದಾರೆ. ಹೀಗೆ ನೀರು ಪೋಲಾದರೆ ಮುಂದೆ ಬೇಸಿಗೆ ಸಮಯದಲ್ಲಿನೀರಿನ ಸಮಸ್ಯೆ ಆಗಬಹುದು. ಮುಂಡರಗಿಯಿಂದ ಬರುವ ದಾರಿಯಲ್ಲಿ ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ನೀರಿನ ಪೈಪ್‌ ಒಡೆದಿರುವುದನ್ನು ರಿಪೇರಿ ಮಾಡಿಸಬೇಕು ಎಂಬುದು ಜನರ ಆಗ್ರಹ.

Leave a Reply

Your email address will not be published. Required fields are marked *