ಗದಗ ಜಿಲ್ಲೆ ಡಂಬಳ ಗ್ರಾಮದ ವಿಕ್ಟೋರಿಯಾ ಮಹಾರಾಣಿ ಕೆರೆಯಲ್ಲಿ ಘಟನೆ ನಡೆದಿದ್ದು, ಅರುಣ ಸಿದ್ಧಪ್ಪ ಯತ್ನಳ್ಳಿ (17) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
ಅರುಣ ಸಿದ್ಧಪ್ಪ ಮಂಗಳವಾರ ತನ್ನ ಮೂವರು ಗೆಳೆಯರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಕೆರೆಯಲ್ಲಿನ ಗುಂಡಿಯಲ್ಲಿ ಸಿಲುಕಿ ನೀರಿನಲ್ಲಿ ಮುಳಗಿದ್ದ. ಮಂಗಳವಾರ ಸಂಜೆಯವರೆಗೆ ನಿರಂತರ ಶೋಧ ಕಾರ್ಯ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ. ಬುಧವಾರ ನುರಿತ ಈಜುಗಾರರ ಮೂಲಕ ಜಾಲಾಡಿದಾಗ ಆತನ ಶವ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.