ಆನ್​ ಲೈನ್ ಗೇಮ್ :ಅಧಿಕಾರಿಯಿಂದ ಬ್ಯಾಂಕ್​​ಗೆ 2 ಕೋಟಿಗೂ ಅಧಿಕ ವಂಚನೆ

ಬ್ಯಾಂಕ್ಕ್​ ಅಧಿಕಾರಿಯಿಂದ ಬ್ಯಾಂಕ್​ ಗೆ ವಂಚನೆ – ಗ್ರಾಹಕರ ಠೇವಣಿ ಹಣ ಅಕ್ರಮ ವರ್ಗಾವಣೆ – ಅಧಿಕಾರಿ ವಿರುದ್ಧ ಬ್ಯಾಂಕ್​ ಮ್ಯಾನೇಜರ್​ ದೂರುಅಧಿಕಾರಿಯಿಂದ ಬ್ಯಾಂಕ್ಗೆ 2 ಕೋಟಿಗೂ ಅಧಿಕ ವಂಚನೆ

ಹಾವೇರಿ : ಬ್ಯಾಂಕ್ ಸಹಾಯಕ ವ್ಯವಸ್ಥಾಪಕನೊಬ್ಬ ಬ್ಯಾಂಕ್‌ಗೆ ವಂಚಿಸಿರುವ ಘಟನೆ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ.

ಹಾವೇರಿಯ ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​​ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬ್ಯಾಂಕ್​ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ಅವರು ಕಳೆದ 2022 ಆಗಸ್ಟ್​​ 22 ರಿಂದ ಫೆಬ್ರವರಿ 7 ರವರೆಗೆ ಗ್ರಾಹಕರು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮಾ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ವೀರೇಶ್​ ಅವರು ಸುಮಾರು 2 ಕೋಟಿ 36 ಲಕ್ಷ ರೂಪಾಯಿ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ಈ ಹಣವನ್ನು ಪಡೆದುಕೊಂಡು ವೀರೇಶ್ ಆನ್​ಲೈನ್ ಗೇಮ್​​ ಆಡುತ್ತಿದ್ದರು ಎಂದು ಎಸ್​ ಪಿ ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಹಾವೇರಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಶಹರ ಠಾಣೆಗೆ ದೂರು ನೀಡಿದ್ದು, ಆರೋಪಿ ವೀರೇಶ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಎರಡು ಕೋಟಿಗೂ ಅಧಿಕ ಹಣ ದುರುಪಯೋಗ ಪಡಿಸಿಕೊಂಡಿರುವುದರಿಂದ ಪ್ರಕರಣವನ್ನು ಆದಷ್ಟು ಬೇಗ ಸಿಐಡಿಗೆ ವರ್ಗಾಯಿಸಲಾಗುವುದು ಎಂದು ಎಸ್ಪಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಇದುವರೆಗೆ ಶಹರ ಠಾಣೆಯ ತನಿಖಾಧಿಕಾರಿ ಈ ಪ್ರಕರಣವನ್ನು ತನಿಖೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ. ಪ್ರಕರಣದಲ್ಲಿ ಶಹರ ಠಾಣೆಯ ತನಿಖಾಧಿಕಾರಿ ಆರೋಪಿಯು ಬಳಕೆ ಮಾಡಲು ಉದ್ದೇಶಿದ್ದ 32 ಲಕ್ಷ ರೂಪಾಯಿಯನ್ನು ತಡೆ ಹಿಡಿದಿದ್ದಾರೆ ಎಂದು ಎಸ್ಪಿ ಶಿವಕುಮಾರ್ ಇದೇ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *