ಗದಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೃದ್ಧ ತಂದೆಯ ತಲೆಗೆ ಕೊಡಲಿಯಿಂದ ಹೊಡೆದು ಮಗ ಹತ್ಯೆ ಮಾಡಿರೋ ದುರ್ಘಟನೆ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ.
ಹದ್ಲಿ ಗ್ರಾಮದ ನಿವಾಸಿ ಮಲಕಸಾಬ (65) ಹತ್ಯೆಯಾದವರು. ಇವರ ಪುತ್ರ ಮೌಲಾಸಾಬ್ ಕೃತ್ಯ ವೆಸಗಿದ ಆರೋಪಿ.
ತಂದೆ ಕುಡಿದು ಬಂದು ಜಗಳ ಮಾಡುತ್ತಿದ್ದರಿಂದ ಮಗ ಮೌಲಾಸಾಬ್ ಬೇಸತ್ತಿದ್ದನು. ಇಂದು ಮತ್ತೆ ಕುಡಿದು ಬಂದು ಜಗಳ ತೆಗೆದಿದ್ದಾನೆ.ಎನ್ನಲಾಗಿದೆ.
ಜಗಳ ವಿಕೋಪಕ್ಕೆ ತಿರುಗಿದ್ದು ಇದೇ ವೇಳೆ ಮಗ ಕೊಡಲಿಯಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ತಂದೆ ಸಾವನ್ನಪ್ಪಿದ್ದಾನೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.