ಗದಗ : ಬಾವಿಯಲ್ಲಿ ಮಹಿಳೆ ಶವ ಪತ್ತೆ ; 3 ವರ್ಷದ ಮಗುವಿಗಾಗಿ ಶೋಧ !

ಗದಗ: ಬಾವಿಯೊಂದರಲ್ಲಿ ಮಹಿಳೆಯು ಶವವಾಗಿ ಪತ್ತೆಯಾಗಿರುವ ಘಟನೆ ಬೆಟಗೇರಿಯ ಆದಿತ್ಯ ನಗರದಲ್ಲಿ ನಡೆದಿದೆ. ರುಬಿನಾ ದಾವಲ್ ಸಾಬ್ ಕಣವಿ (27) ಮೃತ ಮಹಿಳೆ. ಬೆಳಗ್ಗೆ ರುಬಿನಾ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಅವರು ವಾಪಸ್​ ಬಂದಾಗ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಈಕೆಯ 3 ವರ್ಷದ ಮಗು ಜಾವೇದ್ ಕಣವಿ ಕಾಣೆಯಾಗಿದ್ದು ಅಗ್ನಿಶಾಮಕ ಸಿಬ್ಬಂದಿ

ರುಬಿನಾ ಮಗುವಿನ ಜೊತೆಯೇ ಬಾವಿಗೆ ಹಾರಿದ್ದಾಳೆಯೇ ಅಥವಾ ಇನ್ನೇನಾದರು ಅವಘಡ ಸಂಭವಿಸಿದೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಸಂಬಂಧ ರುಬಿನಾ ಪತಿ ದಾವಲಸಾಬ್ ಮತ್ತು ಸಂಬಂಧಿಕರನ್ನ ಗದಗ ಗ್ರಾಮೀಣ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ಇನ್ನು ಮೃತದೇಹವನ್ನ ಜಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *