ಮುಳಗುಂದ : ಇಲ್ಲಿನ ಚಿಂದಿಪೇಟಿ ಓಣಿಯ ಬಸವಣ್ಣೆಪ್ಪ ಹಡ ಪದ ಅವರ ಮನೆಯಲ್ಲಿ ಗುರುವಾರ ರಾತ್ರಿ ಅಡುಗೆ ಸಿಲಿಂಡರ್ ಸೋರಿಕೆ ಯಾಗಿ ಸ್ಫೋಟಗೊಂಡು ಬಾಲಕ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸವಣ್ಣೆಪ್ಪ ಹಡಪದ, ಬಾಲಕ ಆದರ್ಶ ಮತ್ತು ಆತನ ತಾಯಿ ಯಶೋಧಾ ಬೆಂತೂರ ಅವರಿಗೆ ಸುಟ್ಟ ಗಾಯಗಳಾಗಿವೆ.ಸ್ಫೋಟದ ತೀವ್ರತೆಗೆ ಮನೆಯ ಚಾವಣಿ ಕಿತ್ತು, ಪಕ್ಕದ ಮನೆಯ ಗೋಡೆಗೂ ಹಾನಿಯಾಗಿದೆ. ತಕ್ಷಣ ಸ್ಥಳಿ ಯರು ಬಂದು ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಅಶೋಕ ಸದಸಲಗಿ, ಭಾರತ್ ಗ್ಯಾಸ್ ವಿತರಕ ಅನುಪ ಕೆಂಚನಗೌಡ್ರ ಭೇಟಿ ನೀಡಿ ಪರಿಶೀಲಿಸಿದರು.