74 ನೇ ಗಣರಾಜ್ಯೋತ್ಸವದ ಸಂಭ್ರಮ….

ಅಡವಿಸೋಮಾಪೂರ : ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಭ್ರಮದ 74ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಸಂಭ್ರಮದಿಂದ ಗಣರಾಜ್ಯೋತ್ಸವವನ್ನ ಆಚರಿಸಲಾಗುತ್ತಿದೆ. ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗಣರಾಜ್ಯೋತ್ಸವದ ಸಂಭ್ರಮಾಚರಣೆಯು ಗ್ರಾಮದಲ್ಲಿ ತುಂಬಾ ಸಡಗರದಿಂದ ಆಚರಿಸಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೀರಿಶ ಶಿವಪ್ಪ ದೊಡ್ಡಮನಿ ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು , ಹಾಗೂ ಸಹ ಶಿಕ್ಷಕರು ಶಾಲಾ ಮಕ್ಕಳು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

ಗ್ರಾಮೀಣ ಸೊಸೈಟಿ

ಅಡವಿಸೋಮೋಪೂರ ಗ್ರಾಮದ ಸೊಸೈಟಿ ಆಡಳಿತ ಮಂಡಳಿಯ ಪ್ರಲ್ಹಾದ ವೀರುಪಾಕ್ಷಪ್ಪ ಹೊಸಳ್ಳಿ ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಸೊಸೈಟಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಂ ಪಂಚಾಯಿತಿ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳು ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ

ಅಡವಿಸೋಮಾಪೂರ ಗ್ರಾಮ ಪಂಚಾಯಿತಿಯ ಧ್ವಜಾರೋಹಣವನ್ನು ಗ್ರಾಂ ಪಂಚಾಯಿತಿ ಅಧ್ಯಕ್ಷ ಶಾಮಸುಂದರ ಡಂಬಳ ನೆರವೇರಿಸಿದರು ಈ ಸಂದರ್ಭದಲ್ಲಿ ಗ್ರಾಂ ಪಂಚಾಯಿತಿಯ ಸರ್ವ ಸದಸ್ಯರು , ಗ್ರಾಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ

ಅಡವಿಸೋಮಾಪೂರ ಗ್ರಾಮದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರಾದ ಈರಪ್ಪ ಮಾವರಿ ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಗ್ರಾಂ ಪಂಚಾಯಿತಿ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಶಾಲಾ ಮಕ್ಕಳು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ಅಂಗನವಾಡಿ ಕೇಂದ್ರ

ಅಡವಿಸೋಮಾಪೂರ ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಧ್ವಜಾರೋಹಣ ನೆರವೇರಿಸಿದರು ಈ ಸಂದರ್ಭದಲ್ಲಿ ಗ್ರಾಂ ಪಂಚಾಯಿತಿ ಸದಸ್ಯರು ಶಾಲಾ ಮಕ್ಕಳು ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರು ಮಕ್ಕಳು ಉಪಸ್ಥಿತರಿದ್ದರು

ಜಾಮಿಯಾ ಮಸೀದಿ

ಆಡವಿಸೋಮಾಪೂರ ಗ್ರಾಮದ ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ 74 ನೇ ವರ್ಷದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಅಂಜುಮನ್ ಇಸ್ಲಾಂ ಕಮೀಟಿಯ ಅಧ್ಯಕ್ಷರಾದ ಕಾಶೀಮಸಾಬ ಮೌಲಾಸಾಬ ಹರಿವಾಣ ನೇರವೇರಿಸಿದರು.ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮೀಟಿಯ ಸರ್ವ ಸದಸ್ಯರು , ಗ್ರಾಂ ಪಂಚಾಯಿತಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರು ಶಾಲಾ ಮಕ್ಕಳು ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ಸಂಗೊಳ್ಳಿ ರಾಯಣ್ಣ ಸರ್ಕಲ್

ಅಡವಿಸೋಮಾಪೂರ ಗ್ರಾಮದ ಮುಂಡರಗಿ ರಸ್ತೆಗೆ ಹೊಂದಿಕೊಂಡಿರುವ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ 74 ನೇ ಗಣರಾಜ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ 192 ನೇ ಪುಣ್ಯ ಸ್ಮರಣೆ ನಡೆಯಿತು ಈ ಸಂದರ್ಭದಲ್ಲಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಕ್ಕಳ ಭಾಷಣ ಸೇರಿದಂತೆ ಪುನೀತ್ ರಾಜಕುಮಾರ್ ಅವರು ನಟಿಸಿದ ಚಿತ್ರಗಳ ಹಾಡು ಎಲ್ಲರ ಮನಗೆದ್ದಿತ್ತು ಚಪ್ಪಾಳೆ ತಟ್ಟಿ ಮಕ್ಕಳಿಗೆ ಪ್ರೋತ್ಸಾಹಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *