ಗದಗ : ಟ್ಯಾಂಕರ್ ವಾಹನ ಹಾಗೂ ಕ್ಯಾಂಟರ್ ವಾಹನ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಎರಡು ವಾಹನ ಸಂಪೂರ್ಣ ಜಖಂಗೊಂಡಿರುವ ಘಟನೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ನಡೆದಿದೆ.
ಅಪಘಾತದ ರಭಸಕ್ಕೆ ಟ್ಯಾಂಕರ್ ಚಾಲಕನ 2 ಕಾಲು ಕಟ್ ಆಗಿದ್ದು, ವಾಹನ ಒಳಕ್ಕೆ ಸಿಲುಕಿಕೊಂಡು ಚಾಲಕ ನರಳಾಡಿದ್ದಾನೆ.ಪೊಲೀಸರು ಹಾಗೂ ಸ್ಥಳೀಯರಿಂದ ಸಿಲುಕಿಕೊಂಡ ಚಾಲಕನ ರಕ್ಷಣೆ ಮಾಡಲಾಗಿದೆ. ಸಾವು ಬದುಕಿನ ಮಧ್ಯ ಹೋರಾಡ್ತಿರುವ ಚಾಲಕನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕ್ಯಾಂಟರ್ ವಾಹನ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಅತಿಯಾದ ವೇಗ ವಾಹನ ಚಲಾವಣೆಯಿಂದ ಈ ಘಟನೆಗೆ ನಡೆದಿದೆ ಎನ್ನಲಾಗ್ತಿದೆ.
ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
