ಹುಬ್ಬಳ್ಳಿ: ನಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 1.14 ಕೋಟಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೇ ಈ ಸಂಬಂಧ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಹೊಸ ಬಸ್ ನಿಲ್ದಾಣದ ಬಳಿಯಲ್ಲಿ ವ್ಯಕ್ತಿಯೊಬ್ಬನು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿರೋದನ್ನು ಗಮನಿಸಿದ್ದಾರೆ.ಸಮೀಪ ಹೋಗಿ ವಿಚಾರಿಸಿದಾಗ ಮಂಗಳೂರಿಗೆ ತೆರಳುತ್ತಿರೋದಾಗಿ ಹೇಳಿದ್ದಾನೆ.ಅನುಮಾನಗೊಂಡು ಆತನ ಬ್ಯಾಗ್ ತಪಾಸಣೆಗೆ ಒಳಪಡಿಸಿದಾಗ, ಆತನ ಬ್ಯಾಗ್ ನಲ್ಲಿ 1.14 ಕೋಟಿ ಹಣ ಪತ್ತೆಯಾಗಿದೆ. ಈ ಬಗ್ಗೆ ದಾಖಲೆಗಳನ್ನು ಕೇಳಿದಾಗ ಸಮರ್ಪಕವಾಗಿ ಉತ್ತರಿಸಿಲ್ಲ. ಜೊತೆಗೆ ಯಾವುದೇ ದಾಖಲೆ ತೋರಿಸಿಲ್ಲ. ಈ ಹಿನ್ನಲೆಯಲ್ಲಿ ಆ ಹಣವನ್ನು ಜಪ್ತಿ ಮಾಡಿ, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಒಂದು ಮೊಬೈಲ್ ಕೂಡ ಸೀಜ್ ಮಾಡಿದ್ದಾರೆ.