ಮುಂಡರಗಿ : ಕರ್ತವ್ಯ ಲೋಪ ಎಸಗಿರುವ ಡಂಬಳ ಹಿಂದಿನ ಪ್ರಭಾರ ಪಿಡಿಓ ಶಾಬುದ್ದಿನ್ ಕವಡಲೇ ಅಮಾನತು

ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯತಿಯಲ್ಲಿ ನಡೆದ ಸರಕಾರದ ಜಾಗೆಯ ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ದಾಖಲು ಮಾಡಿಕೊಟ್ಟಿರುವ ವಿಚಾರವಾಗಿ ಡಂಬಳ ಗ್ರಾಮ ಪಂಚಾಯತಿಯ ಹಿಂದಿನ ಪ್ರಭಾರ ಪಿಡಿಓ ಆಗಿದ್ದ ಶಾಬುದ್ದಿನ್ ಕವಡಲೆಯವರನ್ನ ಕರ್ತವ್ಯ ಲೋಪ ಎಸಗಿರುವ ಆಧಾರ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ ಜಿಲ್ಲಾ ಪಂಚಾಯತ ಶಿಸ್ತು ಪ್ರಾಧಿಕಾರ ಆದೇಶ ಹೊರಡಿಸಿದೆ.

ಪ್ರಭಾರ ಪಿಡಿಓ ಆಗಿದ್ದ ಶಾಬುದ್ದಿನ್ ಕವಡಲೆಯಇವರ ಅಧಿಕಾರದ ಅವಧಿಯಲ್ಲಿ ಅಕ್ರಮವಾಗಿ ಸರ್ಕಾರದ ಜಾಗೆಯನ್ನು ಖಾಸಗಿ ವ್ಯಕ್ತಿಗಳಿಗೆ ದಾಖಲು ಮಾಡಿದ್ದರ ಬಗ್ಗೆ ಸಮಗ್ರ ತನಿಖೆ ಮಾಡುವ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಶ್ರೀ.ಮಂಜಯ್ಯಸ್ವಾಮಿ , ಬ -ಅರವಟಗಿಮಠ , ಗದಗ ಜಿಲ್ಲಾ ಸಂಚಾಲಕರು ರೈತ ಸೇನಾ ( ರಿ ) ಸಾ : ಡಂಬಳ ತಾ : ಮುಂಡರಗಿ ಇವರು ಈ ಕಾರ್ಯಾಲಯಕ್ಕೆ ಉಲ್ಲೇಖ ( 1 ) ರಲ್ಲಿ ದೂರು ಸಲ್ಲಿಸಿದ ಪ್ರಯುಕ್ತ ಸದರಿ ದೂರಿನಲ್ಲಿರುವ ವಿಷಯದ ಬಗ್ಗೆ ಪರಿಶೀಲಿಸಲು ಸಹಾಯಕ ನಿರ್ದೇಶಕರು ( ಪಂ.ರಾಜ್ ) ತಾ.ಪಂ ಗದಗ ಇವರನ್ನು ನೇಮಿಸಿ ಉಲ್ಲೇಖ ( 2 ) ರಲ್ಲಿ ಆದೇಶಿಸಲಾಗಿತ್ತು . ಅದರಂತೆ ಸಹಾಯಕ ನಿರ್ದೇಶಕರು ( ಪಂ.ರಾಜ್ ) ತಾ.ಪಂ ಗದಗ ಇವರು ದಿ : 17-10-2022 ರಂದು ಡಂಬಳ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದಾಗ ಈ ಕೆಳಗಿನಂತೆ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಉಲ್ಲೇಖ ( 3 ) ರಲ್ಲಿ ವರದಿ ಸಲ್ಲಿಸಿರುತ್ತಾರೆ .

ಆದೇಶ ಪ್ರತಿ

ಸರ್ಕಾರದ ಆದೇಶ ಸಂ : ಗ್ರಾಅಪ : 893 : ಗ್ರಾಪಂಅ : 2016 ದಿ : 21-08-2018 ರ ಚರ ಮತ್ತು ಸ್ಥಿರ ಸ್ವತ್ತುಗಳ ಅರ್ಜನೆ ಮತ್ತು ವರ್ಗಾವಣೆ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ .

ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಪತ್ರ ದಿ : 10-07-2017 ರಲ್ಲಿ ಗ್ರಾಮ ಪಂಚಾಯಿತಿ ಸರ್ಕಾರಿ ಜಮೀನು / ನಿವೇಶನಗಳನ ಯಾರಿಗೂ ( ಬಡವರಿಗಾಗ ೮ ) ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟ ನಿರ್ದೇಶನವಿದ್ದರೂ ಸಹಿತ ಮಾರ್ಗಸೂಚಿ ಉಲ್ಲಂಘನೆ ಮಾಡಿರುತ್ತಾರೆ .

ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಪತ್ರ ದಿ : 10-07-2017 ರಲ್ಲಿ ಗ್ರಾಮ ಪಂಚಾಯಿತಿ ಸರ್ಕಾರಿ ಜಮೀನು / ನಿವೇಶನಗಳನ ಯಾರಿಗೂ ( ಬಡವರಿಗಾಗ ೮ ) ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟ ನಿರ್ದೇಶನವಿದ್ದರೂ ಸಹಿತ ಮಾರ್ಗಸೂಚಿ ಉಲ್ಲಂಘನೆ ಮಾಡಿರುತ್ತಾರೆ .

ಗ್ರಾಮ ಪಂಚಾಯತ ವಸತಿ ಕಾರ್ಯಕ್ರಮ ಯೋಜನೆ ( GPHP ) 1999 ರ ಯೋಜನೆಯಲ್ಲಿರುವ ಫಲಾನುಭವಿಗಳನ್ನು ಹೊರತುಪಡಿಸಿ ಶ್ರೀ.ಎಸ್.ಕೆ.ಕವಡೇಅ , ಹಿಂದಿನ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದಗ , ಗ್ರಾಮ ಪಂಚಾಯತ ಡಂಬಳ ತಾ : ಮುಂಡರಗಿ ಇವರು ಅಕ್ರಮವಾಗಿ ಬೇರೆಯವರಿಗೆ ( GPHP ) ಜಾಗೆಯಲ್ಲಿ ನೀವಶನ ನೀಡಿರುವುದು ಕಂಡುಬಂದಿದೆ .

ಈ ಮೇಲಿನ ವರದಿಯನ್ನು ಪರಿಶೀಲಿಸಿದಾಗ ಶ್ರೀ.ಎಸ್.ಕೆ.ಕವಡೇಲಿ, ಹಿಂದಿನ ಪ್ರಭಾರ ಪಂಚಾಯತ ಅಭಿವೃದ್ಧಿ ಅಧಿಕಾರಿ , ಗ್ರಾಮ ಪಂಚಾಯತ ಡಂಬಳ ತಾ ಮುಂಡರಗಿ ಪ್ರಸ್ತುತ ಗ್ರೇಡ -02 ಕಾರ್ಯದರ್ಶಿ ಗ್ರಾ.ಪಂ ಕೊರ್ಲಹಳ್ಳಿ ಇವರು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತ್‌ಗೊಳಿಸುವುದು ಸೂಕ್ತವೆಂದು ಭಾವಿಸಿ ಈ ಈ ಮೇಲಿನಂತೆ ಆದೇಶ ಹೊರಡಿಸಿದೆ

Leave a Reply

Your email address will not be published. Required fields are marked *