ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಯುವಕ

ಗದಗ: ನಗರದ ಕಳಸಾಪುರ ರಸ್ತೆಯಲ್ಲಿನ ಮೆಟ್ರಿಕ್ ನಂತರದ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯನ್ನು ಹೊಡೆಯುತ್ತಿದ್ದ ಯುವಕನನ್ನು ತರಾಟೆಗೆ ತೆಗೆದುಕೊಂಡ ಯುವಕನಿಂದ ವಿದ್ಯಾರ್ಥಿಯನ್ನ ಬಚಾವ್ ಮಾಡಿದ ಸ್ಥಳೀಯ ಮಹಿಳೆಯರು, ಯುವಕನಿಗೆ ಕಪಾಳಮೋಕ್ಷ ಮಾಡುವ ಮೂಲಕ ಕೈಯಲ್ಲಿ ಕೋಲು ಹಿಡಿದು ಕಿಡಿಗೇಡಿಗೆ ಪಾಠ ಕಲಿಸಿದ್ದಾರೆ.

ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿನಿಗೆ ಈ ಹಿಂದೆಯೇ ನಿಲಯದ ಸಿಬ್ಬಂದಿಗಳು ವಾರ್ನ್ ಮಾಡಿದ್ದರು. ಆದರೂ ಕೂಡಾ ವಿದ್ಯಾರ್ಥಿನಿ ಯುವಕನ ಜೊತೆಗೆ ಸಲುಗೆಯಿಂದ ಇರುತ್ತಿದ್ದಳು. ಇದೀಗ ವಿದ್ಯಾರ್ಥಿನಿಯನ್ನ ಬಚಾವ್ ಮಾಡಿ, ಕಿಡಿಗೇಡಿಗೆ ಪಾಠ ಕಲಿಸಿ, ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ ಯುವಕನನ್ನ ಗದಗ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *