ಗದಗ : ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿ

ಮೆಣಸಿನಕಾಯಿಗೆ ಬಂಪರ್ ಬೆಲೆ ಕಂಡ ರೈತ ದಂಪತಿಗೆ ಗದಗ ಎಪಿಎಂಸಿಯಲ್ಲಿ ಸನ್ಮಾನ ಮಾಡಲಾಗಿದೆ. ಜೀವನ ನಿರ್ವಹಣೆಗೆ ಶಿಕ್ಷಕ ವೃತ್ತಿ ತೊರೆದು ಕೃಷಿಯತ್ತ ಮುಖ ಮಾಡಿದ ರೈತ ದಂಪತಿ ಭಾರಿ ಯಶಸ್ಸು ಸಾಧಿಸಿದ್ದಾರೆ.

ಗದಗ: ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಇಲ್ಲಿನ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಹಾರ ಹಾಕಿ ಅಭಿನಂದಿಸಿದ್ದಾರೆ.ಮೆಣಸಿನಕಾಯಿಯನ್ನು ಮಕ್ಕಳಂತೆ ಜೋಪಾನ ಮಾಡುವ ಮೂಲಕ ಬಂಗಾರಂತದ ಬೆಳೆ ಬೆಳೆದಿದ್ದಾರೆ ಎಂದು ಎಪಿಎಂಸಿ ಸಿಬ್ಬಂದಿ ಅವರ ಬಗ್ಗೆ ಈ ಪ್ರಶಂಸೆ ವ್ಯಕ್ತಪಡಿಸಿದರು.

ಬಂಪರ್ ಬೆಲೆ

ಕಳೆದ ತಿಂಗಳು ಇದೇ ಮಾರುಕಟ್ಟೆಯಲ್ಲಿ ಕೋಟಮಚಗಿ ಗ್ರಾಮದ ರೈತರೊಬ್ಬರು ಬೆಳೆದ ಮೆಣಸಿನಕಾಯಿಗೆ ಕ್ವಿಂಟಲ್​ಗೆ 70,199 ರೂ. ಬೆಲೆ ಬಂದಿತ್ತು. ಆಗ ಎಪಿಎಂಸಿಯವರು ಇದೇ ದೊಡ್ಡ ಮೊತ್ತ ಎಂದಿದ್ದರು. ಈ ತಿಂಗಳು ಕ್ವಿಂಟಲ್​ಗೆ ಬರೋಬ್ಬರಿ 72,999 ರೂ. ದರವಿದೆ.​ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ‌ ಗ್ರಾಮದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ಎಂಬ ರೈತ ದಂಪತಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಯ ಬೆಲೆ: ಹಿಂದಿನ ದಾಖಲೆಯನ್ನು ಉಡೀಸ್ ಮಾಡಿ, ದಾಖಲೆ ಬೆಲೆಗೆ ಮೆಣಸಿನಕಾಯಿ ಮಾರಾಟವಾಗಿದ್ದರಿಂದ ಈ ರೈತ ದಂಪತಿಯನ್ನು ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಗದಗ ಎಪಿಎಂಸಿ ವರ್ತಕರು ಹಾಗೂ ರೈತರು ಹೂವಿನ ಮಾಲೆ ಹಾಕಿ ಇತ್ತೀಚೆಗೆ ಅಭಿನಂದಿಸಿದ್ದಾರೆ. ಈ ಮೂಲಕ ಸಂಕ್ರಾಂತಿ ಸುಗ್ಗಿ ಹಬ್ಬದ ಹೊಸ್ತಿಲಲ್ಲಿ ಈ ದಂಪತಿ ಬೆಳೆದ ಕೆಂಪು ಸುಂದರಿಗೆ ಸಂಕ್ರಾಂತಿ ಬಂಪರ್ ಗಿಫ್ಟ್ ಸಿಕ್ಕಂತಾಗಿದೆ. ಕಷ್ಟಪಟ್ಟು ಬೆಳೆದ ಮೆಣಸಿನಕಾಯಿಗೆ ಬಂಗಾರದ ಬೆಲೆ ಮೀರಿಸುವ ಬೆಲೆ ಸಿಕ್ಕಿದೆ. ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಬರೋಬ್ಬರಿ 72,999 ಸಾವಿರ ದರ ಲಭಿಸಿದೆ. ನಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ರೈತ ದಂಪತಿ ಸಂತಸ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *