ಅರ್ನ್ ಮನಿ ಆಯಪ್ ಕಳುಹಿಸಿ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ಪ್ರತಿಷ್ಠಿತ ಮನೆತನದ ಮಹಿಳೆಯೊಬ್ಬರಿಗೆ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿದ ಘಟನೆ ಗದಗ ನಗರದಲ್ಲಿ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ವಿದ್ಯಾ ಎಂಬ ಪ್ರತಿಷ್ಠಿತ ಮನೆತನದ ಮಹಿಳೆಗೆ ಅಕ್ಟೋಬರ್ 3ರಂದು +63991427160 ಮತ್ತು +639498074279 ನಂಬರಿನಿಂದ ಅರ್ನ್ ಮನಿ ಆಯಪ್ ಕಳುಹಿಸಿ ಪ್ಲೇ ಮಾಡುತ್ತಾ ಹೋದರೆ ಹಣ ದ್ವಿಗುಣವಾಗುತ್ತದೆ ಎಂದು ಹೇಳಿ ಮೊದಲಿಗೆ ಎರಡು ಸಾವಿರ ಹಣ ಹಾಕಿ ನಂಬಿಸಿದ್ದಾರೆ.ನಂತರ ಅಕೌಂಟ್ ಫ್ರೀಜ್ ಆಗಿದೆ, ಓಪನ್ ಆಗಲು ಯುಪಿಐಡಿ ನಂಬರ್ಗಳನ್ನು ಕಳುಹಿಸಿ ಒಟ್ಟು 10,57,950ರೂ. ಹಾಕಿಸಿಕೊಂಡಿದ್ದಾರೆ. ರಾಕೇಶ್ ಸಿಂಗ್- 9647251753 ಹಾಗೂ ವಿಪಿನ್ ಗುಪ್ತಾಗೆ 9733184532 ನಂಬರನಿಂದ ಕರೆ ಮಾಡಿ ನಟರಾಜ್ ಪೆನ್ಸಿಲ್ ಕಂಪನಿಯಿಂದ ಮನೆಯಿಂದಲೇ ಹಣ ಗಳಿಸಬಹುದು ಎಂದು ಹೇಳಿ 2,35,000 ಹಾಕಿಸಿಕೊಂಡಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ಫೇಕ್ ಅಕೌಂಟ್ ತೆರೆದು ಬೇರೆಯವರಿಗೆ ವಂಚನೆ ಮಾಡಿದ್ದಾರೆ. ಈ ಕುರಿತು ಗದಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರೀತಿ ಮೋಸ ಹೋಗುವ ಪ್ರಕರಣ ಹೆಚ್ಚಾಗುತ್ತಿವೆ. ಜನರು ಆನ್ ಲೈನ್, ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮೋಸದ ಜಾಲಕ್ಕೆ ಬಲೆ ಬಿಳಬಾರದು. ಎಚ್ಚರಿಕೆಯಿಂದ ಇರಬೇಕು ಎಂದು ಗದಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.