Monday, September 16, 2024
Google search engine
Homeಆರೋಗ್ಯಗದಗ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ - ಸಂಗಮೇಶ ಬಬಲೇಶ್ವರ

ಗದಗ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ – ಸಂಗಮೇಶ ಬಬಲೇಶ್ವರ

ಗದಗ  ಜುಲೈ 18 : ಧಾರವಾಡದ ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡಮಿಯಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಬುಧವಾರ ನಗರದ ಬಾಲಕಿಯರ ಸರಕಾರಿ ಬಾಲ ಮಂದಿರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅವರು ಅಲ್ಲಿನ ವಸತಿ, ಆಹಾರ ಪದಾರ್ಥಗಳು, ಕ್ರೀಡೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಪರಿಕರಗಳನ್ನು ಪರಿಶೀಲಿಸಿದರು. ಮಕ್ಕಳೊಂದಿಗೆ ಸಂವಾದ ಮಾಡಿ, ಮಕ್ಕಳ ಕುಶಲೋಪರಿ ವಿಚಾರಿಸಿದರು, ಮಕ್ಕಳ ಹವ್ಯಾಸಗಳು, ಮಕ್ಕಳ ವಿಶೇಷ ಪ್ರತಿಭೆಗಳ ಬಗ್ಗೆ ಚರ್ಚಿಸಿದರು. ಮಕ್ಕಳು ತಯಾರಿಸಿದ ಕರಕುಶಲ ವಸ್ತುಗಳನ್ನು ವೀಕ್ಷಿಸಿದರು.

ಮಕ್ಕಳಿಗೆ ಕೌಟುಂಬಿಕ ವಾತಾವರಣವನ್ನು ಸೃಷ್ಠಿಸುವುದು, ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸುವುದು ಮಕ್ಕಳೊಂದಿಗೆ ನಿರಂತರ ಸಮಾಲೋಚನೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನ ನಿಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಶ್ರಮಿಸಬೇಕು ಎಂದು ತಿಳಿಸಿದರು.

ಬಾಲಮಂದಿರ ಕಟ್ಟಡ ವೀಕ್ಷಿಸಿ ಮಕ್ಕಳ ಹಿತದೃಷ್ಠಿಯಿಂದ ಕಂಪೌಂಡ ಅವಶ್ಯವಿದ್ದು, ಬೇಗನೆ ಅನುದಾನ ಬಿಡುಗಡೆಗೆ ಅನುಪಾಲನೆ ಮಾಡಲು ಸೂಚಿಸಿದರು. ಮಳೆಗಾಲದ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕನ್‍ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ತಾಗದಂತೆ ಎಚ್ಚರ ವಹಿಸಿ ಮತ್ತು ವಸತಿ ನಿಲಯದ ಸುತ್ತಮುತ್ತ ಕೊಳಚೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಬಾಲಕಿಯರ ಸರಕಾರಿ ಬಾಲಮಂದಿರದ ಅಧೀಕ್ಷಕರು ಶ್ರೀಮತಿ ಲಕ್ಷ್ಮೀ ಬಾಗೇವಾಡಿ, ಶ್ರೀಮತಿ ಶಶಿಕಲಾ ಕವಲೂರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಬ ಬೆಟಗೇರಿ, ಶ್ರೀಮತಿ ರೂಪಾ ಎಸ್ ಉಪ್ಪಿನ್ ಹಾಗೂ ರವಿ ಉಮಚಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ ಗದಗ : ಅರ್ಥಪೂರ್ಣವಾಗಿ ಪೈಗಂಬರ್ ಜಯಂತಿ ಆಚರಣೆ : ಬಾಷಾಸಾಬ್ ಮಲ್ಲಸಮುದ್ರ ಗದಗ : ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ ಗದಗ : ಸೆ.17 ರಿಂದ ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ‘ದಸರಾ ಕ್ರೀಡಾಕೂಟ’ ಆಯೋಜನೆ ಗದಗ : ಗದಗ ಬೆಟಗೇರಿ ನಗರಸಭೆ : ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಗದಗ : ತಂದೆ ಇಲ್ಲದ ಮಕ್ಕಳ ಖಾತೆಗೆ ಮಾತ್ರ ಸರ್ಕಾರ ವರ್ಷಕ್ಕೆ 24000 ರೂ. ಗಳ ಸುದ್ದಿಯಲ್ಲಿ ಸತ್ಯಾಂಶವಿಲ್ಲ  ಗದಗ : ಲಿಂಗ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ  ೧೪ ಪುಣ್ಯಸ್ಮರಣೆ ಆಚರಣೆ