ಗದಗ ೧೪ : ಅಲ್‌ಮದಿನಾ ಗ್ರೂಪ್‌ನ ಪತ್ರಿಕಾ ಗೋಷ್ಠಿ ಜರುಗಿತು. ಈ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅಲ್‌ಮದಿನಾ ಗ್ರೂಪಿನ ನೇತೃತ್ವ ವಹಿಸಿದ ಬಾಷಾಸಾಬ ಮಲ್ಲಸಮುದ್ರ ಮಾತನಾಡಿ ದಿನಾಂಕ: ೨೮/೦೯/೨೦೨೫ ರಂದು ಗದಗ ಬೆಟಗೇರಿ ಅಂಜುಮನ್-ಏ-ಇಸ್ಲಾA ಸಂಸ್ಥೆಯ ಚುನಾವಣೆಯಲ್ಲಿ ನಮ್ಮ ಗ್ರೂಪಿಗೆ ಸಾತ್ ನೀಡಿದ್ದು. ಪರೋಕ್ಷವಾಗಿ ಪ್ರತ್ಯೇಕ್ಷವಾಗಿ ಬೆಂಬಲಿಸಿ ನಮ್ಮ ೧೧ ಜನ ಅಭ್ಯರ್ಥಿಗಳಿಗೆ ದೊಡ್ಡ ಪ್ರಮಾಣದಲ್ಲಿ ಮತ ಹಾಕಿ ಒಟ್ಟು ೧೮,೧೮೯ ಮತಗಳನ್ನು ನಮ್ಮ ಗುಂಪಿಗೆ ಹಾಕಿದ್ದು. ಅದರಲ್ಲಿ ೩ ಅಭ್ಯರ್ಥಿಗಳು ವಿಜೇತರಾಗಿದ್ದು ಇರುತ್ತದೆ. ಕಾರಣ ಗದಗ ಬೆಟಗೇರಿ ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರಿಗೆ ಕೃತಜ್ಞತಾ ಸಮಾರೋಪ ಸಮಾರಂಭ ದಿನಾಂಕ: ೧೬/೧೦/೨೦೨೫ ರಂದು ಸಾಯಂಕಾಲ: ೫ ಗಂಟೆಗೆ ಗದಗ ನಗರದ ಜಾಕೀರ ಹುಸೇನ ಕಾಲೋನಿ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದು. ಅವಳಿ ನಗರದ ಎಲ್ಲಾ ಮುಸ್ಲಿಂ ಸಮಾಜ ಬಾಂಧವರು ನಮ್ಮ ಕೃತಜ್ಞತಾ ಸಮಾರೋಪ ಸಮಾರಂಭವನ್ನು ಸ್ವೀಕರಿಸಿ ನಮ್ಮ ಮುಂದಿನ ನಡೆಗೆ ಮಾರ್ಗದರ್ಶನ ಮಾಡಬೇಕೆಂದು ನಮ್ಮ ಅಲ್‌ಮದಿನಾ ಗ್ರೂಪಿನ ೧೧ ಜನ ಸದಸ್ಯರಾದ ೧) ಆಸೀಫ. ದಂಡಿನ ೨) ಬಾಬು ನರಸಾಪೂರ ೩) ಬಶೀರಸಾಬ. ಸಂಕನಾಳ೪) ದಾವಲಸಾಬ. ಮಲ್ಲಸಮುದ್ರ ೫) ಕರೀಮಸಾಬ. ಸುಣಗಾರ ೬) ಮೆಹಬೂಬ. ಹುನಗುಂದ ೭) ಮೆಹಬೂಬಬಾಷಾ ಗಡಾದ ೮) ಸಾಧಿಕ ಬುಡ್ಡೇಸಾಬ ನರೇಗಲ್ಲ ೯) ಶಾಕೀರ. ಕಾತರಕಿ ೧೦) ಸುಲೇಮಾನ ಮಾಳೇಕೊಪ್ಪ ೧೧) ಯುಸೂಫಸಾಬ ಕೊಟ್ಟೂರ ವಿನಂತಿಪೂರ್ವಕ ಮನವಿ ಮಾಡಿಕೊಂಡರು.
ಈ ಚುನಾವಣೆಯಲ್ಲಿ ಅಲ್ ಮದಿನಾ ಗ್ರೂಪ್ ೧೮,೧೮೯ ಮತ ಪಡೆದಿದೆ. ಇಂಕ್ವಿಲಾಬ್ ಗ್ರೂಪ್ ೨೩,೪೫೭ಮತ ಪಡೆದಿರುವುದು, ೧೯ ಪಕ್ಷೇತರ ಅಭ್ಯರ್ಥಿಗಳು ೧೧,೮೨೯ ಮತ ಪಡೆದಿರುವುದು ಒಟ್ಟು ಮತದಾನ ೫೩,೪೭೫ ಆಗಿದೆ ಎಂದು ಭಾಷಾಸಾಬ ಮಲ್ಲಸಮುದ್ರ ತಿಳಿಸಿದರು.