13.1 C
New York
Tuesday, October 14, 2025

Buy now

spot_img

ಗದಗ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಅರ್ಥಪೂರ್ಣ ದಸರಾ ಆಚರಣೆ

ಗದಗ : ಸರಳತೆಗೆ ಮಾದರಿಯಾದ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರು ಈ ಬಾರಿ ದಸರಾ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಸಾಮಾನ್ಯವಾಗಿ ಆಡಳಿತದ ಮೇಲ್ದರ್ಜೆಯ ಅಧಿಕಾರಿಗಳ ಮನೆ, ಕಚೇರಿ, ಮಂಟಪಗಳಲ್ಲಿ ಭವ್ಯ ಸಮಾರಂಭಗಳು ನಡೆಯುವ ದಸರಾ ಹಬ್ಬವನ್ನು ಅವರು ಕಂದಾಯ ವಸತಿ ಆವರಣದಲ್ಲಿ ಪೌರ ಕಾರ್ಮಿಕರು ಹಾಗೂ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಆಚರಿಸಿ ಹೊಸ ಸಂದೇಶ ನೀಡಿದ್ದಾರೆ.

ಅಕ್ಟೋಬರ್ ೨ರಂದು ಕಂದಾಯ ವಸತಿ ಆವರಣದಲ್ಲಿ ನಡೆದ ವಿಜಯದಶಮಿ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನೌಕರರು, ಸ್ವಚ್ಚತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಹಬ್ಬದ ಸಂಭ್ರಮವನ್ನು ಎಲ್ಲರೊಡನೆ ಹಂಚಿಕೊಂಡ ಜಿಲ್ಲಾಧಿಕಾರಿ, ಹೂವು–ಹಣ್ಣಿನ ವಿನಿಮಯ ಮಾಡಿ ಪರಸ್ಪರ ದಸರಾ ಶುಭಾಶಯ ಕೋರಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರು ತಮ್ಮ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಅಧಿಕಾರಿಗಳು, ಕಚೇರಿ ಸಿಬ್ಬಂದಿ ಹಾಗೂ ಕಾರ್ಮಿಕರು ಒಂದೇ ವೇದಿಕೆಯಲ್ಲಿ ಸೇರಿ ಆಚರಿಸಿದ ಈ ಸರಳ ದಸರಾ ಕಾರ್ಯಕ್ರಮದಲ್ಲಿ ಎಲ್ಲರೂ ಸಮಾನವಾಗಿ ಹಬ್ಬದ ಆನಂದವನ್ನು ಹಂಚಿಕೊಂಡರು.

ಜಿಲ್ಲಾಧಿಕಾರಿ ಶ್ರೀಧರರ ಈ ನಡೆ “ಅಧಿಕಾರಿ–ಸಿಬ್ಬಂದಿ–ಪೌರ ಕಾರ್ಮಿಕರ ನಡುವಣ ನಿಕಟತೆ ಹೆಚ್ಚಿಸುವ ಅರ್ಥಪೂರ್ಣ ಹಬ್ಬ” ಎಂದು ಜನರು ಶ್ಲಾಘಿಸಿದ್ದಾರೆ.

ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಈ ಸರಳ ದಸರಾ, ಅಧಿಕಾರಿಗಳ ಸರಳ ಬದುಕು ಹಾಗೂ ಮಾನವೀಯತೆ ಎಷ್ಟು ಪ್ರೇರಣಾದಾಯಕವಾಗಬಹುದು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಯಿತು.

ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರು ಕಂದಾಯ ನೌಕರರು, ಸ್ಚಚ್ಚತಾ ಕೆಲಸಗಾರರು, ಪೌರ ಕಾರ್ಮಿಕರೊಂದಿಗೆ ಉಪಹಾರ ಸವಿದು ಹಬ್ಬವನ್ನು ಸರಳ ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ, ನಗರ ಸಭೆ ಪೌರಾಯುಕ್ತ ರಾಜಾರಾಮ ಪವಾರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಆನಂದ ಬದಿ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ…. ಗದಗ  :  ನಶಾಮುಕ್ತ  ಗದಗ ಜಿಲ್ಲೆಯನ್ನು ನಿರ್ಮಿಸೋಣ: ಸಚಿವ ಎಚ್. ಕೆ. ಪಾಟೀಲ್ ಗದಗ : ಪೋಷಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗದಗ : ಜಿಲ್ಲೆಯಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಗದಗ : ಕುಟುಂಬ ಕಲಹ : ಹೆಂಡತಿಯನ್ನು ಕೊಲೆಗೈದ ಗಂಡ..! ಗದಗ : ಗ್ರಾಮಾಭಿವೃದ್ಧಿಗೆ ಕೆಳಹಂತದ ವಾರ್ಷಿಕ ಯೋಜನೆ ಅತ್ಯಂತ ಸಹಕಾರಿ : ಡಾ.‌ ಯತೀಂದ್ರ ಸಿದ್ಧರಾಮಯ್ಯ ಗದಗ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಅರ್ಥಪೂರ್ಣ ದಸರಾ ಆಚರಣೆ ಗದಗ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಗದಗ : ಅಲ್ಪಸಂಖ್ಯಾತರ ಇಲಾಖಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಆಶ್ರಮದ ಶಾಲೆಯಂತಿದೆ : ಪರಮಪೂಜ್ಯ ಮೃಡಗಿರಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶ...