13.1 C
New York
Tuesday, October 14, 2025

Buy now

spot_img

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಆಶ್ರಮದ ಶಾಲೆಯಂತಿದೆ : ಪರಮಪೂಜ್ಯ ಮೃಡಗಿರಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಮುಂಡರಗಿ.

ಚಿಕ್ಕಟ್ಟಿ ಶಾಲಾ – ಕಾಲೇಜುಗಳಲ್ಲಿ ಸಾಧಕರ ಸಂಭ್ರಮ-೨೦೨೫

ಗದಗ : ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ ಮುಂಡರಗಿಯ ಪರಮಪೂಜ್ಯ ಮೃಡಗಿರಿಯ ಶ್ರೀಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ತಮ್ಮ ಆಶೀರ್ವಚನದ ಮೂಲಕ

ಶಿಕ್ಷಣ ಹೆಚ್ಚಿದರೆ ಶಿರ ತುಂಬಬೇಕು,

ಶಿಕ್ಷಣದಿಂದ ಕರ ತುಂಬಬೇಕು,

ಶಿಕ್ಷಣದಿಂದ ಉರ ತುಂಬಬೇಕು,

ಶಿಕ್ಷಣದಿಂದ ಅರಿವು ಸಾಧ್ಯವಾಗಬೇಕು,

ಶಿಕ್ಷಣ ಕಾಯಕ್ಕೆೆ ಕಾರಣವಾಗಬೇಕು,

ಶಿಕ್ಷಣದಿಂ ಹೃದಯ ಭಾವಗಳು ಸಂವೇದನೆಗೊಳ್ಳಬೇಕು,

ಮೃಡಗಿರಿ ಅನ್ನದಾನೀಶ ಎನ್ನುವ ವಚನದಂತೆ ಶಿಕ್ಷಣ ಜೀವನದ ಅಂತರಾಳವನ್ನು ಪ್ರವೇಶಿಸಿ ನಿತ್ಯ ಆಚರಣೆಗೆ ಅಗತ್ಯವಾದ ಸಿದ್ಧಾಂತಗಳನ್ನು ಕಲಿಸುತ್ತದೆ. ಸಮಾಜದ ಅಭಿವೃದ್ಧಿಗೆ ಜನರ ಮನಸ್ಸನ್ನು ಹದಗೊಳಿಸುವುದೇ ಶಿಕ್ಷಣದ ಮೂಲ ಗುರಿ. ಇಂತಹ ಶಿಕ್ಷಣದಿಂದ ಮಾನವನ ಶಿರ, ಕರ, ಹಾಗೂ ಉದರಗಳು ತುಂಬಬೇಕು. ಸಮಾಜದಲ್ಲಿಯ ಉತ್ತಮ ಸಂಪ್ರದಾಯ ಶಿಸ್ತು ಹಾಗೂ ಸಂಸ್ಕöÈತಿಯನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಕಲಿಸುವಲ್ಲಿ ವಿದ್ಯೆಯ ಪಾತ್ರ ಆತ್ಯಂತ ಮುಖ್ಯವಾಗಿದೆ. ಅಂತ ವಿದ್ಯಾ-ಬುದ್ಧಿಯನ್ನು ಕಲಿಸುತ್ತಿರುವ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಆಶ್ರಮದ ಶಾಲೆಯಂತಿದೆ ಎಂದು ತಿಳಿಸುತ್ತಾ, ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಭಾಗ್ಯವಂತರು ಎಂದು ತಿಳಿಸುತ್ತಾ,

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,

ಸುತ್ತಿ ಸುಳಿದು ನೋಡÀದಂತೆ ಅಂಧಕನ ಮಾಡಯ್ಯ ತಂದೆ,

ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ,

ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು

ಕೂಡಲ ಸಂಗಮದೇವ

ಎನ್ನುವ ಬಸವಣ್ಣನವರ ವಚನದಂತೆ ನಿಮ್ಮ ಮನಸ್ಸು ಬೇರೆ ವಿಚಾರUಳÀತ್ತ ಹೋಗದೇ ಓದಿನಲ್ಲಿಯೇ ಕೇಂದ್ರಿಕೃತವಾಗಬೇಕು. ಸುತ್ತ ಮುತ್ತ ನೋಡದೇ ಪುಸ್ತಕವನ್ನೆ ನೋಡುತ್ತ ಅನ್ಯ ವಿಷಯಗಳನ್ನು ಕೇಳಿಸಿಕೊಳ್ಳದೆÉà ಕಿವುಡರಂತಿದ್ದು, ಪಾಠ ಪ್ರವಚನಗಳನ್ನು ಮಾತ್ರ ಕೇಳಿಸಿಕೊಂಡು ಉತ್ತಮ ಸಂಸ್ಕಾರವAತ ಮಕ್ಕಳಾಗಿರಿ ಹಾಗಾದಾಗ ಮಾತ್ರ ತಾವು ಓದಿರುವ ಶಾಲೆಗೂ, ವಿದ್ಯಾ-ಬುದ್ಧಿ ಕಲಿಸಿದ ಗುರುಗಳಿಗೂ, ಹೆತ್ತು ಹೊತ್ತು, ಸಾಕಿ ಸಲುಹಿದ ತಂದೆ ತಾಯಿಗಳ ಗೌರವವು ಹೆಚ್ಚಾಗುತ್ತೆ ಎಂದು ಶ್ರೀಗಳು ತಮ್ಮ ಶುಭಾಶೀರ್ವಾದದ ಸಂದೇಶ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರಸೀಕೆರೆÉಯ ಸ್ವದೇಶಿ ದಿಶಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗುರುಲಿಂಗಯ್ಯ ಕೆ. ಪಿ. ಅವರು ಮಾತನಾಡುತ್ತಾ, ನಾನು ರೈತಾಪಿ ಕುಟುಬಂದಿದ ಬಂದAತ ಸಾಮಾನ್ಯ ವ್ಯಕ್ತಿ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ, ಮುಂದೆ ಎಂ.ಬಿ.ಎ. ಪದವಿ ಪಡೆದು ಮಾರ್ಕೆಟಿಂಗ್‌ನಲ್ಲಿ ವಿಶೇಷ ಅನುಭವವನ್ನು ಪಡೆದು, ಬೇರೆ ಬೇರೆ ದೇಶÀಗಳಲ್ಲಿಯ ಬಹುರಾಷ್ಟಿçÃಯ ಕಂಪನಿಗಳಲ್ಲಿ ಉನ್ನತ ಹುದ್ದೆಯನ್ನು ಪಡೆದು ಕಾರ್ಯನಿರ್ವಹಿಸಿ, ನಾನು ನನ್ನ ಜ್ಞಾನವನ್ನು ವಿದೇಶಿ ಕಂಪನಿಗಳಿಗೆ ಧಾರೆಯೆರೆಯುವುದಕ್ಕಿಂತ ನನ್ನ ದೇಶದ ಜನತೆಯ ಒಳಿತಿಗಾಗಿ ಉಪಯೋಗಿಸೋಣ ಎಂದು ವಿಚಾರಿಸಿದಾಗ, ನನ್ನ ಹುಟ್ಟೂರಿನಲ್ಲಿ ಹೆಚ್ಚು ಬೆಳೆಯುವಂತ ಕಲ್ಪವೃಕ್ಷ ಎಂದೆನಿಸಿದ ತೆಂಗಿನಕಾಯಿ ನೆನಪಿಗೆ ಬಂತು. ಅದರಿಂದಲೇ ಅತ್ಯುತ್ತಮವಾದ ತೆಂಗೆನ ಎಣ್ಣೆಯನ್ನು ತಾಯಾರಿಸುವ ಕಂಪನಿಯನ್ನು ಆರಂಭಗೊಳಿಸಿದೆ, ನೈಜ (ವರ್ಜಿನ್) ತೆಂಗಿನ ಎಣ್ಣೆಯು ಜನ ಮನ್ನಣೆ ಪಡೆದು ರಾಷ್ಟç ಅಂತರಾಷ್ಟಿçÃಯ ಮಟ್ಟದಲ್ಲೂ ಯಶಸ್ಸು ಪಡೆದು ಮಾರಾಟವಾಗುತ್ತಿದೆ. ನಂತರದ ದಿನಮಾನಗಳಲ್ಲಿ ತೆಂಗಿನ ಎಣ್ಣೆಯ ಜೊತೆಗೆ ಇತರೆ ಹನ್ನೆರಡು ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ನಮ್ಮ ಆರೋಗ್ಯ ನಮ್ಮ ಅಡಿಗೆ ಮನೆಯಲ್ಲಿದೆ. ನಾವು ಸೇವಿಸುವ ಎಣ್ಣೆ, ದವಸ ದಾನ್ಯ, ತರಕಾರಿಗಳಲ್ಲಿ ಅಡಗಿದೆ, ನಾವು ಬಳಸುವ ಟೊಮೆಟೊ ಹಣ್ಣು ಮೂರು ತಿಂಗಳ ಬೆಳೆ, ಬಿಸಿಲು ತಡೆಯುವುದಿಲ್ಲ ಮಳೆಯನ್ನು ತಡೆಯುವುದಿಲ್ಲ. ಒಂದೇ ಕೈಯಿಂದ ಸುಲಭವಾಗಿ ಕಿತ್ತು ಬಿಸಾಕಬಹುದು, ಆದರೆ ಅದರ ಬದಲಾಗಿ ಹುಣಸೆ ಹಣ್ಣು ಬಳಸಿದರೆ ಹುಣಸೆ ಮರ ಆಗಲಿಕ್ಕೆ ಐದು ವರ್ಷ ಬೇಕು, ಮರವಾದ ಮೇಲೆ ಎಂತಹ ಜೋರಾದ ಮಳೆ ಬರಲಿ, ಗಾಳಿ ಬೀಸಲಿ, ರಣ ಬಿಸಿಲಿದ್ದರೂ ಸಹಿಸಿಕೊಂಡು, ಮಳೆ ಇಲ್ಲದೆಯೂ ಸಹ ವರ್ಷಗಟ್ಟಲೆ ಹಣ್ಣು ಕೊಡುತ್ತಾ ಸಾವಿರಾರು ವರ್ಷ ಇರುವಂತ ಮರ. ಹುಣಸೆ ಹಣ್ಣಿನ ಹುಳಿ ಹಿಂಡಿ ಮಾಡಿದ ಅಡುಗೆ ಕೆಡದಂತೆ, ಆರೋಗ್ಯದೊಂದಿಗೆ ಸದೃಡರಾಗಿರುತ್ತೇವೆ. ಆದರೆ ಈಗ ನಮ್ಮ ಮನೆಗಳಲ್ಲಿ ಹುಣಸೆ ಹಣ್ಣಿನ ಬದಲಾಗಿ ಟೊಮೆಟೊ ಹಣ್ಣನ್ನೇ ಹೆಚ್ಚು ಬಳಸುತ್ತಿದ್ದೇವೆ, ಹಾಗಾಗದೇ ಟೊಮೆಟೊ ಹಣ್ಣು ಬಿಟ್ಟು ಹುಣಸೆ ಹಣ್ಣನ್ನು ಬಳಸಿ ಅಡುಗೆ ತಯಾರಿಸಿದರೆ ಆ ಮರದಂತೆ ನಾವು ದೀರ್ಘಾಯುಷಿಗಳಾಗುತ್ತೇವೆ. ಒಂದು ವಿಷಯವನ್ನು ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕು, ಸಸ್ಯಗಳನ್ನು ಸೇವನೆ ಮಾಡಿದ ವ್ಯಕ್ತಿಗಳಲ್ಲಿ ಸಸ್ಯದಲ್ಲಿರುವ ಗುಣಾವಶೇಷಗಳು ವ್ಯಕ್ತಿಗಳಲ್ಲೂ ಪ್ರಭಾವ ಬೀರುತ್ತವೆ, ಆದರೆ ಪ್ರಾಣಿಗಳ ಮಾಂಸ ಸೇವನೆ ಮಾಡಿದ ವ್ಯಕ್ತಿಗಳಲ್ಲಿ ಪ್ರಾಣಿಗಳ ಗುಣಾವಶೇಷಗಳು ಬುರುವುದಿಲ್ಲ. ಹಾಗಾಗಿ ಯಾವುದನ್ನು ಸೇವಿಸಬೇಕೆಂಬುದನ್ನು ತಾವುಗಳೇ ನಿರ್ಧರಿಸಿರಿ. ಇಂತಹ ಅನೇಕ ಉದಾಹರಣೆಗಳ ಮೂಲಕ ‘ಆರೋಗ್ಯವೇ ಮಹಾ ಭಾಗ್ಯ’ ಎನ್ನುವಂತೆ ನಾವು ಆರೋಗ್ಯದಿಂದ್ದರೆ ಏನಾದರೂ ಸಾಧನೆ ಮಾಡಿ ಸಾಧಕರಾಗಲು ಸಾಧ್ಯ. ಹಾಗಾಗಿ ತಮ್ಮೆಲ್ಲರ ಮೊದಲ ಆದ್ಯತೆ ಆರೋಗ್ಯವಾಗಿರಲಿ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿಯವರು ಮಾತನಾಡುತ್ತಾ, ಪ್ರತಿ ವರ್ಷ ಸೆಪ್ಟಂಬರ ತಿಂಗಳಲ್ಲಿ ಆಚರಿಸುವಂತೆ ಈ ೨೦೨೫ರ ವರ್ಷವೂ ಸಹಿತ ಸಾಧಕರ ಸಂಭ್ರಮ ಕಾರ್ಯಕ್ರಮವು ಮುಂಡರಗಿಯ ಪರಮ ಪೂಜ್ಯ ಮೃಡಗಿರಿಯ ಶ್ರಿಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ, ಸಮಾಜ ಮುಖಿ ಚಟುವಟಿಕೆಗಳಿಂದ ಸಾಧನೆ ಮಾಡಿ ಸಾಧಕರಾದ ಜನಮನಗಳನ್ನು ಗೆದ್ದಿರುವ ಗಣ್ಯ ವ್ಯಕ್ತಿಗಳಾದ ಶ್ರೀ ಜಗನ್ನಾಥ ಜಮಾದಾರ, ನಿಲಯ ನಿರ್ದೇಶಕರು, ಸಹಕಾರ ಸಮುದಾಯದ ರೇಡಿಯೊ, ಹುಲುಕೋಟಿ, ಶ್ರೀ ರವಿ. ಎಸ್. ಮುಖ್ಯ ಸಂಪಾದಕರು, ಜೀ ಕನ್ನಡ ನ್ಯೂಸ್ ಬೆಂಗಳೂರು. ಡಾ ರಾಮಾಶಾಸ್ತಿçà ಎಸ್. ಜೀರೆ, ಅಧ್ಯಕ್ಷರು, ಸಾಯಿರಾಮ್ ಟ್ರಸ್ಟ ಕಮೀಟಿ ಗಜೇಂದ್ರಗಡ. ಶ್ರೀಮತಿ ಸುನಿತಾ ಆರ್. ಬುರಡಿ, ಕಿರಿಯ ತರಬೇತಿ ಅಧಿಕಾರಿಗಳು, ಕೆ. ಎಚ್. ಪಾಟೀಲ್ ಸರ್ಕಾರಿ ಐ.ಟಿ.ಐ, ಕಾಲೇಜು ಗದಗ- ಬೇಟಗೇರಿ. ಶ್ರೀ ಪ್ರಕಾಶಗೌಡ ಜಿ. ಪಾಟೀಲ, ಪ್ರಾಂಶುಪಾಲರು, ಜೆ.ಟಿ. ಕಾಲೇಜು ಗದಗ. ಶ್ರೀ ಭೀಮಗೌಡ ಆರ್. ಮಿರ್ಜೆ, ನಿವೃತ್ತ ಪಿ.ಕೆ.ಪಿ.ಎಸ್. ವ್ಯವಸ್ಥಾಪಕರು, ಅಡಹಳಟ್ಟಿ, ಜಿಲ್ಲಾ ಬೆಳಗಾವಿ. ಇವರೆಲ್ಲರನ್ನು ಅಭಿನಂದನಾ ಪತ್ರಗಳನ್ನು ನೀಡಿ ಗೌರವದೊಂದಿಗೆ ಸನ್ಮಾನಿಸಲಾಯಿತು. ಈ ಮೂಲಕ ಯುವ ಪೀಳಿಗೆಗೆ ಪ್ರೇರಣೆ ನೀಡಿ ಪರಿಚಯಿಸುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಈ ಎಲ್ಲ ಸಾಧಕರ ಸಾಧನೆಗಳನ್ನು ಎಲ್.ಇ.ಡಿ ಸ್ಕಿçÃನ ಮೂಲಕ ವಿವರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದಿವ್ಯ ಸಾನಿಧ್ಯವಹಿಸಿದ ಮುಂಡರಗಿಯ ಪರಮಪೂಜ್ಯ ಮೃಡಗಿರಿಯ ಶ್ರೀಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ವೆದಿಕೆಯಲ್ಲಿರುವ ಸಾಧಕರು ಹಾಗೂ ಗಣ್ಯಮಾನ್ಯರು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು.

ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಮೃಡಗಿರಿಯ ಶ್ರೀಮನ್ ಮಹಾರಾಜ ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳನ್ನು ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಧೆಗಳ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಸಂತರಾಜಕಾರಣಿ ಹಾಗೂ ಉಪಾಧ್ಯಕ್ಷರು ವಿಕೇಂದ್ರಿಕರಣ ಯೋಜನೆ ಹಾಗೂ ಅಭಿವೃದ್ಧಿ ಕರ್ನಾಟಕ ಸರಕಾರದ ಮಾನ್ಯ ಶ್ರೀ ಡಿ. ಆರ್. ಪಾಟೀಲ ಅವರು ಹಾಗೂ ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಆರ್. ಎಸ್. ಬುರುಡಿಯವರು ಹಾಗೂ ಪ್ರಾಚಾರ್ಯರಾದ ಶ್ರೀ ವಿನಯ್ ಎಸ್. ಚಿಕ್ಕಟ್ಟಿ, ಉಪಸ್ಥಿತರಿದ್ದರು.

ಕಾರ್ಯಕ್ರಮವು ವಿನಯ್ ಚಿಕ್ಕಟ್ಟಿ ಐ.ಸಿ.ಎಸ್.ಇ ೯ನೇ ತರಗತಿಯ ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯ ಗೀತೆಯೊಂದಿಗೆ ಆರಂಭಗೊAಡಿತು, ಬಿ.ಸಿ.ಎ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿಪಿನ್. ಎಸ್. ಚಿಕ್ಕಟ್ಟಿ ಯವರು ಸ್ವಾಗತಿಸಿದರು. ಬಿಪಿನ್ ಚಿಕ್ಕಟ್ಟಿ ಪ್ರೌಢ ಶಾಲಾ ವಿದ್ಯಾರ್ಥಿನಿಯರಾದ ಶ್ರೇಯಾ ಮುಳಗಂದಮಠ, ಸುಪ್ರೀತಾ ನೀಲಗುಂದ ಹಾಗೂ ಬಿಪಿನ್ ಚಿಕ್ಕಟ್ಟಿ ಪಿ.ಯು. ಕಾಲೇಜಿನ ಸಾನಿಕಾ ಕಾಲವಾಡಮಠ ನಿರೂಪಿಸಿದರು. ಶಿಕ್ಷಕರಾದ ಶ್ರೀ ಗಣೇಶ್ ಬಡ್ನಿ ವಂದನಾರ್ಪಣೆಗೈದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಕಲಿಯುಗದ ಕುಡುಕ” ರಾಜು ತಾಳಿಕೋಟಿ ಇನ್ನಿಲ್ಲ…. ಗದಗ  :  ನಶಾಮುಕ್ತ  ಗದಗ ಜಿಲ್ಲೆಯನ್ನು ನಿರ್ಮಿಸೋಣ: ಸಚಿವ ಎಚ್. ಕೆ. ಪಾಟೀಲ್ ಗದಗ : ಪೋಷಣ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಗದಗ : ಜಿಲ್ಲೆಯಲ್ಲಿ 123 ಪ್ರಕರಣಗಳು ಮಧ್ಯಸ್ಥಿಕೆಯಲ್ಲಿ ಇತ್ಯರ್ಥ ಗದಗ : ಕುಟುಂಬ ಕಲಹ : ಹೆಂಡತಿಯನ್ನು ಕೊಲೆಗೈದ ಗಂಡ..! ಗದಗ : ಗ್ರಾಮಾಭಿವೃದ್ಧಿಗೆ ಕೆಳಹಂತದ ವಾರ್ಷಿಕ ಯೋಜನೆ ಅತ್ಯಂತ ಸಹಕಾರಿ : ಡಾ.‌ ಯತೀಂದ್ರ ಸಿದ್ಧರಾಮಯ್ಯ ಗದಗ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಅವರಿಂದ ಅರ್ಥಪೂರ್ಣ ದಸರಾ ಆಚರಣೆ ಗದಗ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಗದಗ : ಅಲ್ಪಸಂಖ್ಯಾತರ ಇಲಾಖಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯು ಆಶ್ರಮದ ಶಾಲೆಯಂತಿದೆ : ಪರಮಪೂಜ್ಯ ಮೃಡಗಿರಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶ...