ಅಡವಿಸೋಮಾಪೂರ ಐತಿಹಾಸಿಕ ಶ್ರಿ ಗೋಣಿ ಬಸವೇಶ್ವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗದಗ : ಜಿಲ್ಲೆಯ ಗದಗ ತಾಲೂಕಿನ ಸುಕ್ಷೇತ್ರ ಅಡವಿಸೋಮಾಪೂರ ಗೋಣಿ ಬಸವೇಶ್ವರ ಸ್ವಾಮಿ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.
ಗೋಣಿ ಬಸವೇಶ್ವರ ಈ ಮೂರ್ತಿಯನ್ನು ಸರ್ವ ಜನಾಂಗದ ಭಕ್ತರು ಕಣ್ತುಂಬಿಕೊಳ್ಳುವ ಇಷ್ಟಾರ್ಥ ನೆರವೇರುವಂತೆ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಸೋಮವಾರ ಬೆಳಗ್ಗೆ ಗೋಣಿ ಬಸವೇಶ್ವರ ಗೆ ವಿಶೇಷ ಅಲಂಕಾರ, ಅಭಿಷೇಕ
ನಡೆಯಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಭಕ್ತಿಯಿಂದ ಸ್ವಿಕರಿಸಿದರು.
ಸಾವಿರಾರು ಭಕ್ತರು, ರಥಕ್ಕೆ , ಉತ್ತತ್ತಿ ಎಸೆದು ಹರಕೆ ಸಮರ್ಪಿಸಿದರು. ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಗೋಣಿ ಬಸವೇಶ್ವರರ ಧ್ವಜವನ್ನು ಬಹಿರಂಗ ಹರಾಜು ಮಾಡಲಾಯಿತು. ಬೃಹತ್ ಹಾರ ದಂತಹ ಹೂವುಗಳಿಂದ ತೇರನ್ನು ಅಲಂಕರಿಸಲಾಗಿತ್ತು
ರಥೋತ್ಸವಕ್ಕೆ ಸುತ್ತ ಮುತ್ತಲಿನ, ಗ್ರಾಮಸ್ಥರು ಗದಗ ಸೇರಿದಂತೆ ವಿವಿಧೆಡೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.