ಗದಗ : ಆಗಷ್ಟ 12 : ಜಿಲ್ಲೆಯ ಗದಗ ತಾಲೂಕಿನ ಸುಕ್ಷೇತ್ರ ಅಡವಿಸೋಮಾಪೂರ ಗ್ರಾಮದ ಆರಾಧ್ಯ ದೈವ ಶ್ರೀ ಗೋಣೆ ಬಸವೇಶ್ವರ ಜಾತ್ರಾ ಮಹೋತ್ಸವದ ಮೊದಲನೇ ದಿನದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಜರುಗಿದವು.
ಅದಕ್ಕೂ ಮೊದಲು ಪ್ರತಿಷ್ಠಾಪನೆ ಗೊಳಲಿರುವ ಶ್ರೀ ಗೋಣಿ ಬಸವೇಶ್ವರ ಮೂರ್ತಿ ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಹಾಗೂ ಕಳಸಕ್ಕೆ ಪೂಜೆ ಬಳಿಕ ನಡೆದ ಬೆಳಿಗ್ಗೆ ಮೂರ್ತಿಯನ್ನು ಮೆರವಣಿಗೆ ಗದಗ ರಸ್ತೆಯ ಬನ್ನಿ ಕಟ್ಟಿ ದೇವಾಸ್ಥನದಿಂದ ಅಡವಿಸೋಮಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗೋಣಿ ಬಸವೇಶ್ವರ ಮೂರ್ತಿ ಹಾಗೂ ಗೋಪುರದ ಕಳಸ ಮೆರವಣಿಗೆ ಮುಖಾಂತರ ಬರಮಾಡಿಕೋಳಲಾಯಿತು
200 ಕ್ಕೂ ಅಧಿಕ ಕುಂಭ ಕಳಸ ಹೊತ್ತ ಮಹಿಳೆಯರು, ಡೊಳ್ಳು ಮಜ್ಜಲು ,ಯುವಕರ ಕೋಲಾಟ ಮಕ್ಕಳು, ವಿವಿಧ ಸಮುದಾಯಗಳ ಪ್ರಮುಖರು, ಕಲಾಮೇಳದವರು ಸಂಭ್ರಮದ ಮೆರವಣಿಗೆಗೆ ಕಳೆ ತಂದರು.
ಮೆರವಣಿಗೆಯದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಶೃಂಗಾರಗೊಂಡ ಟ್ರ್ಯಾಕ್ಟರ್ ಮೆರವಣಿಗೆ ಎತ್ತಿನ ಬಂಡಿಗಳು, , ಡೊಳ್ಳಿನ ಮಜಲು ನಂದಿಕೋಲು ಮೇಳಗಳು ಯುವಕರ ಕೋಲಾಟ ನೋಡುಗರ ಕಣ್ಮನ ಸೆಳೆಯುವ ರೀತಿಯಲ್ಲಿ ಇದ್ದವು. ನೂತನ ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದ ವರೆಗೆ ವಿಜ್ರಂಭಣೆಯಿಂದ ಮೆರವಣಿಗೆ ನಡೆಯಿತು.