ಗದಗ : ಇದೆ ಆಗಸ್ಟ್ ೧೨ ರಿಂದ ೧೯ ರವರೆಗೆ ಗದಗ ತಾಲೂಕಿನ ಅಡವಿಸೋಮಪುರ ಗ್ರಾಮದ ಶ್ರೀ ಗೋಣಿಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಪ್ರವಚನ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಜರಗುವವು ಎಂದು ಶ್ರೀ ಗೋಣಿಬಸವೇಶ್ವರ ಕಮೀಟಿಯ ಗೌರವಾಧ್ಯಕ್ಷರಾದ ಆನಂದಪ್ಪ ಪುರದ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆಗಸ್ಟ್ ೧೨ ರಂದು ಮಂಗಳವಾರ ಬೆಳಿಗ್ಗೆ ೬ ಗಂಟೆಗೆ ಬನ್ನಿಕಟ್ಟಿ ದೇವಸ್ಥಾನದಿಂದ ಕುಂಭಮೇಳದೊAದಿಗೆ ಶ್ರೀ ಗೋಣಿಬಸವೇಶ್ವರ ಮೂರ್ತಿ ಹಾಗೂ ಕಳಸದ ಮೆರವಣಿಗೆವು ಗ್ರಾಮಕ್ಕೆ ಆಗಮಿಸುವುದು. ಸಂಜೆ ೬ ಗಂಟೆಗೆ ಮಹಾತ್ಮ ಶ್ರೀ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಪ್ರಾರಂಭವಾಗುವದು.
ಈ ಕಾರ್ಯಕ್ರಮದಲ್ಲಿ ಕೊರ್ಲಹಳ್ಳಿ ಸಂಸ್ಥಾನಮಠದ ಪೂಜ್ಯಶ್ರೀ ಪಟ್ಟದ ಚಿನ್ಮಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಅಡವಿಸೋಮಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪವಿತ್ರಾ ಹೊಸಳ್ಳಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ಗಡೇದ, ಗ್ರಾಪಂ ಉಪಾಧ್ಯಕ್ಷರಾದ ಶ್ಯಾಮಸುಂದರ ಡಂಬಳ, ಶ್ರೀ ಗೋಣಿ ಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಲಂಕೆಪ್ಪ ಹೊಸಳ್ಳಿ, ಸದಸ್ಯ ವೀರನಗೌಡ ಹರ್ಲಾಪುರ ಉಪಸ್ಥಿತರಿರುವರು ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಡಿ ಮಾತನಾಡಿ, ಆ. ೧೨ ರಿಂದ ೧೬ ರವರೆಗೆ ಪ್ರತಿದಿನ ಸಂಜೆ ೬ ಗಂಟೆಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಂಬುಲಿAಗ ಶಾಸ್ತಿçಗಳಿಂದ ಶ್ರೀ ಗೋಣಿಬಸವೇಶ್ವರ ಚರಿತ್ರೆಯ ಪ್ರವಚನ ಕಾರ್ಯಕ್ರಮ ಜರುಗುವುದು. ಆಗಸ್ಟ್ ೧೩ ರಂದು ಬೆಳಗ್ಗೆ ೭.೪೭ ಗಂಟೆಗೆ ಶ್ರೀ ಗೋಣಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರುಗುವುದು, ಬೆಳಿಗ್ಗೆ ೧೦ ಗಂಟೆಗೆ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಮತ್ತು ಕಳಸಾರೋಹಣ ಹಾಗೂ ಸಂಜೆ ೬ ಗಂಟೆಗೆ ಪ್ರವಚನ ಮತ್ತು ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ ಆಗಸ್ಟ್ ೧೮ ರಂದು ಸೋಮವಾರ ಬೆಳಗ್ಗೆ ೬ ಗಂಟೆಗೆ ಶ್ರೀ ಗೋಣಿಬಸವೇಶ್ವರ ದೇವರಿಗೆ ಮಹಾರುದ್ರಭಿಷೇಕ ಸಂಜೆ ೫.೩೦ ಗಂಟೆಗೆ ಅಮೃತಗಳಿಗೆಯಲ್ಲಿ ಶ್ರೀ ಗೋಣಿಬಸವೇಶ್ವರ ಮಹಾರಥೋತ್ಸವ ಜರಗುವುದು ರಾತ್ರಿ ೯ ಗಂಟೆಗೆ ಶ್ರೀ ಗೋಣಿಬಸವೇಶ್ವರ ನಾಟ್ಯ ಸಂಘದ ವತಿಯಿಂದ ತವರಿದ್ದರೂ ತಬ್ಬಲಿಯಾದೆ ಎಂಬ ಸುಂದರ ಸಾಮಾಜಿಕ ನಾಟಕ ಆಗಸ್ಟ್ ೧೯ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಜನಪದ ಸ್ಪರ್ಧೆ, ಸಂಜೆ ೫.೩೦ ಗಂಟೆಗೆ ಕಡುಬಿನ ಕಾಳಗ ಲಘುರಥೋತ್ಸವ ಜರುಗುವುದು. ಮಧ್ಯಾಹ್ನ ೨ ಗಂಟೆಗೆ ಬಯಲು ಜಂಗಿ ನಿಕಾಲಿ ಕುಸ್ತಿ ಜರುಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಮೀಟಿಯ ಅಧ್ಯಕ್ಷ ಲೆಂಕೆಪ್ಪ ಹೋಸಳ್ಳಿ, ಉಪಾಧ್ಯಕ್ಷರಾದ ಈರಪ್ಪ ಮಾವರಿ, ಕಾರ್ಯದರ್ಶಿ ಸಂಗಪ್ಪ ಯೋಗಿ, ಸದಸ್ಯರಾದ ಅಲ್ಲಸಾಬ,ಕುಮೂನೂರ ಮುತ್ತಪ್ಪ ಹಳ್ಳಿಕೇರಿ, ಮುಂಜುನಾಥ ನಾಗಾವಿ, ಹುಚ್ಚಿರಪ್ಪ ಹರ್ತಿ, ಅಂಬರೀಶ ಜಕ್ಕಮ್ಮನವರ, ಬಸವರಾಜ ಈರಜನವರು, ಸಿದ್ದಪ್ಪ ಸಿದ್ನೆಕೊಪ್ಪ, ಮಂಜುನಾಥ ಪೂಜಾರ, ಈರಪ್ಪ ದೊಡ್ಡಮನಿ, ಬೂದಪ್ಪ ರೂಡ್ಡನ್ನವರ, ವೀರನಗೌಡ ಪಾಟೀಲ, ಮುತ್ತಪ್ಪ ಸೋಮನಕಟ್ಟಿ,
ಸುರೇಶ ಉಮ್ಮಣವರ, ಈರಪ್ಪ ದುರಗಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.