14.5 C
New York
Thursday, October 23, 2025

Buy now

spot_img

ಆರ್.ಎಮ್.ಎಸ್.ಎ.ಸರ್ಕಾರಿ ಪ್ರೌಢಶಾಲಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಗದಗ  ಜುಲೈ 25 : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ರೋಣ, ಸರ್ಕಾರಿ ಪ್ರೌಢಶಾಲೆ, ಮುಗಳಿ ಇವರ ಸಹಯೋಗದಲ್ಲಿ ಆರ್.ಎಮ್.ಎಸ್.ಎ. ಸರ್ಕಾರಿ ಪ್ರೌಢ ಶಾಲಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಜುಲೈ 28 ರಂದು ಅಪರಾಹ್ನ 2 ಗಂಟೆಗೆ ರೋಣ ತಾಲೂಕಿನ ಮುಗಳಿ ಸರ್ಕಾರಿ ಪ್ರೌಢಶಾಲಾ ( ಆರ್.ಎಂ.ಎಸ್.ಎ ) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ , ರಾಜ್ಯದ ಕಾನೂನು , ನ್ಯಾಯ, ಮಾನವ ಹಕ್ಕುಗಳು , ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಲಿದ್ದಾರೆ.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ, ಸರ್ಕಾರಿ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಶಾಸಕರಾದ ಸಲೀಂ ಅಹ್ಮದ್, ಬಾಗಲಕೋಟಿ ಸಂಸದರಾದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ, ನರಗುಂದ ಶಾಸಕ ಸಿ.ಸಿ.ಪಾಟೀಲ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಕೊತಬಾಳ ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಭೀಮವ್ವ ಗುಳಗುಳಿ, ರೋಣ ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಮಿಥುನ್ ಜಿ ಪಾಟೀಲ, ಕೊತಬಾಳ ಗ್ರಾ.ಪಂ ಉಪಾಧ್ಯಕ್ಷ ಹನಮಪ್ಪ ಅಸೂಟಿ, ಆಗಮಿಸುವರು.

ವಿಶೇಷ ಆಹ್ವಾನಿತರಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿ.ರಶ್ಮಿ ಮಹೇಶ, ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ , ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ , ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ , ಶಾಲಾ ಶಿಕ್ಷಣ ಇಲಾಖೆ ( ಆಡಳಿತ) ಯ ಉಪನಿರ್ದೇಶಕ ಆರ್.ಎಸ್.ಬುರುಡಿ, ಶಾಲಾ ಶಿಕ್ಷಣ ಇಲಾಖೆ ( ಅಭಿವೃದ್ಧಿ) ಜಿ.ಎಲ್.ಬಾರಾಟಕ್ಕೆ, ಎಸ್.ಎಸ್.ಕೆ. ಉಪಯೋಜನಾ ಸಮನ್ವಯಾಧಿಕಾರಿ ಎಮ್.ಎಚ್.ಕಂಬಳೀ, ಆರ್.ಎಮ್.ಎಸ್.ಎ ಉಪಯೋಜನಾ ಸಮನ್ವಯಾಧಿಕಾರಿ ರವಿ ಪ್ರಕಾಶ, ಎಸ್.ಎಸ್.ಕೆ. ಸಹಾಯಕ ಯೋಜನಾ ಸಮನ್ವಯಾಧಿಕಾರಿ ಡಾ.ಶರಣು ಗೋಗೇರಿ ಹಾಗೂ ಶಿವಕುಮಾರ್ ಕುರಿಯವರ ಆಗಮಿಸಲಿದ್ದಾರೆ.

ವಿಶ್ರಾಂತ ಉಪನಿರ್ದೇಶಕ ಎಂ.ಎ.ರಡ್ಡೇರ,ವಿಶ್ರಾAತ ವಿಸ್ತೀರ್ಣಾಧಿಕಾರಿ ಶಾಸಪ್ಪ ಲ ಉಪ್ಪಾರ, ಗ್ರಾಮದ ಹಿರಿಯರಾದ ಎಂ.ಎಸ್. ದೇಸಾಯಿ, ಬಸವರಾಜ ಉಸಲಕೊಪ್ಪದ, ಯಲ್ಲಪ್ಪ ಕುರಿ, ಮುದಿಯಪ್ಪ ಶಿ ಹಿರೇಮನಿ , ಶ್ರೀಮತಿ ಗುರುಬಸಮ್ಮ ಶಾಂತಯ್ಯ ಹಿರೇಮಠ ಅವರುಗಳನ್ನು ಸನ್ಮಾನಿಸಲಾಗುವುದು.

ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ್ ಕಂಬೋಗಿ, ರೋಣ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ, ರೋಣ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ಎಸ.ಪಾಟೀಲ, ರೋಣ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎ. ಫಣಿಬಂದ, ಕೊತಬಾಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಿಯಾಜ್ ಖತಿಬ್, ಮುಗಳಿ ಸರ್ಕಾರಿ ಪ್ರೌಡಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖವಾಸ್ತ , ಮುಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮುದಿಯಪ್ಪ ರಾ. ಬಿಸಾಟಿ, ಮುಗಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಎ.ಹುನಗುಂದ, ಮುಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಟಿ. ಆರೇರ ಸರ್ವರಿಗೂ ಸ್ವಾಗತ ಕೋರಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news