ಗದಗ : ಎಸ್ಪಿ ಬಿ.ಎಸ್ ನೇಮಗೌಡ ಸೇರಿ 35 ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ.
ಗದಗ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ನೇ ಬ್ಯಾಚ್,ನ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ನೇಮಿಸಿ ಸರ್ಕಾರ ಆದೇಶಿಸಿದೆ.
ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಯಂಗ್ & ಎನರ್ಜಿಟಿಕ್ ಅಧಿಕಾರಿ ರೋಹನ್ ಜಗದೀಶ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಕಳೆದೆ ಎರಡೂವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಎಸ್ಪಿ ಬಿ.ಎಸ್ ನೇಮಗೌಡ ಅವರನ್ನು ಬೆಂಗಳೂರು ಸಿಟಿ ನಾರ್ಥ್ ಡಿವಿಜಿನ್ ಡಿಸಿಪಿಯಾಗಿ ನೇಮಕ ಮಾಡಿಲಾಗಿದೆ.