ಗದಗ : ಗದಗ ತಾಲ್ಲೂಕಿನ ಅಡವಿಸೋಮಾಪೂರ ಗ್ರಾಮದ ಗದ್ದಿಹಳ್ಳ ಹತ್ತಿರ ಎತ್ತಿನ ಬಂಡಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಗದಗ ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ (ಗದ್ದಿಹಳ್ಳ ಹತ್ತಿರ) ಎತ್ತಿನ ಬಂಡಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಅಪಘಾತದ ನಡೆದಿದೆ.
ಎತ್ತಿನ ಬಂಡಿ ಓಡಿಸುತ್ತಿದ್ದ ರೈತ, ಎತ್ತಿನ ಬಂಡಿಯಲ್ಲಿ 3 ಜನ ರೈತ ಕೂಲಿಕಾರರು ಹಾಗೂ ಎರಡು ಎತ್ತುಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆ ಗೆ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊಪ್ಪಳ ಕಡೆಯಿಂದ ಹುಬ್ಬಳ್ಳಿಗೆ ಹೊರಟ್ಟಿದ್ದ ಕಾರು..ಅಡವಿಸೋಮಾಪೂರ ದಿಂದ ಗದಗ ಕಡೆಗೆ ಹೊರಟ್ಟಿದ್ದ ಎತ್ತಿನ ಚಕ್ಕಡಿ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.